Site icon PowerTV

ಕ್ಷುಲ್ಲಕ ಕಾರಣಕ್ಕೆ ಕಂದಾಯ ಅಧಿಕಾರಿ ಮೇಲೆ ಪೊಲೀಸಪ್ಪನ ದರ್ಪ

ಧಾರವಾಡ : ‘ಜನಸ್ನೇಹಿ ಪೊಲೀಸ್ ಠಾಣೆ ಅಣ್ಣಿಗೇರಿ.. ಹಸಿರು ಜೀವನದ ಉಸಿರು, ಪೊಲೀಸ್ ಶಿಸ್ತಿನ ಹೆಸರು’. ಈ ರೀತಿ ಗೋಡೆ ಬರಹ ಕಾಣಸಿಗುವ ಠಾಣೆಯ ಗೌರವವನ್ನ ಅಲ್ಲಿನ ಪೊಲೀಸಪ್ಪ ಹರಾಜು ಹಾಕಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಕಂದಾಯ ಅಧಿಕಾರಿ ಮೇಲೆ ಪೊಲೀಸಪ್ಪ ದರ್ಪ ತೋರಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯ ಪೇದೆ ಮಂಜು ನಾಗಾವಿ ಎಂಬುವವರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಪೊಲೀಸ್ ಪೇದೆ ಬೈಕ್ ಮೇಲೆ ನೀರಿನ ಬಾಟಲ್ ಇಟ್ಟಿದ್ದಕ್ಕೆ ಕಂದಾಯ ಇಲಾಖೆ ಅಧಿಕಾರಿ ರಿಷಿ ಸಾರಂಗ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಾಟಲ್ ಇಟ್ಟಿದ್ದು ಯಾಕೆ ಎಂದು ಅಶ್ಲೀಲವಾಗಿ ಬೈದಿರುವ ಆರೋಪ ಕೇಳಿಬಂದಿದೆ. ಇನ್ನೂ ಹಲ್ಲೆ ಮಾಡಿರುವ ಬಗ್ಗೆ ಅಣ್ಣಿಗೇರಿ ಪಟ್ಟಣದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿ, ಕೂಡಲೇ ಹಲ್ಲೆ ಮಾಡಿದ ಪೊಲೀಸ್​​ ಪೇದೆಗೆ ಕಾನೂನಾತ್ಮಕ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

Exit mobile version