Site icon PowerTV

ಅಕ್ರಮ ಪಡಿತರ ಸೌಲಭ್ಯ ಪಡೆದವರಿಂದ 1 ಕೋಟಿ ರೂ. ದಂಡ ವಸೂಲಿ!

ತುಮಕೂರು: ನಿಯಮ ಗಾಳಿಗೆ ತೂರಿ ಅಕ್ರಮವಾಗಿ ಪಡಿತರ ಸೌಲಭ್ಯ ಪಡೆಯುತ್ತಿದ್ದವರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪಾಠ ಕಲಿಸಿದೆ. ಭಾರಿ ದಂಡ ವಿಧಿಸುವ ಮೂಲಕ ತಪ್ಪಿಗೆ ಎಚ್ಚರಿಕೆ ಕರೆಘಂಟೆ ಬಾರಿಸಿದೆ.

ಅನರ್ಹ ಪಡಿತರ ಚೀಟಿದಾರರಿಂದ ತುಮಕೂರು ಜಿಲ್ಲೆಯಲ್ಲಿ ಒಟ್ಟು 1 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ತುಮಕೂರು ಜಿಲ್ಲೆಯ ತಾಲೂಕುವಾರು ನೋಡುವುದಾದರೇ, ಚಿ.ನಾ.ಹಳ್ಳಿಯಲ್ಲಿ 9,49,742 ರೂ., ಗುಬ್ಬಿಯಲ್ಲಿ 10,58,023 ರೂ., ಕೊರಟಗೆರೆಯಲ್ಲಿ 11,62,002 ರೂ., ಕುಣಿಗಲ್‌ನಲ್ಲಿ 5,59,732 ರೂ., ಮಧುಗಿರಿಯಲ್ಲಿ 7,07,518 ರೂ., ಪಾವಗಡದಲ್ಲಿ 7,71,471 ರೂ., ಶಿರಾದಲ್ಲಿ 21,57,510 ರೂ. ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ಗೌರಿಶಂಕರ್ ‘ಕೈ’ ಸೇರ್ಪಡೆ: ಕೆ.ಎನ್​ ರಾಜಣ್ಣ ಅಸಮಾಧಾನ

ಇನ್ನು ಜಿಲ್ಲೆಯ ತಿಪಟೂರಲ್ಲಿ 8,38,064 ರೂ., ತುಮಕೂರು ನಗರದಲ್ಲಿ 7,92,256 ರೂ., ತುಮಕೂರು ಗ್ರಾಮಾಂತರದಲ್ಲಿ9,50,560 ರೂ. ಹಾಗೂ ತುರುವೇಕೆರೆಯಲ್ಲಿ7,26,540 ರೂ. ಸೇರಿದಂತೆ ಇಡೀ ಜಿಲ್ಲೆಯಲ್ಲಿಇಲಾಖೆ ಸದ್ಯ 1,06,73,418 ರೂ. ದಂಡ ವಸೂಲಿ ಮಾಡಿದೆ.

Exit mobile version