Site icon PowerTV

BBK Season 10 : ಪ್ರತಾಪ್​ಗೆ ಗಾಳ ಹಾಕಿದ ವಿನಯ್

ಬೆಂಗಳೂರು: ಬಿಗ್​ ಬಾಸ್ ಸೀಸನ್ 10ರಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗುತ್ತಿವೆ. ಮೊದಲು ದ್ವೇಷಿಯದವರು ತಮ್ಮ ತಂವನ್ನು ಬಲಿಷ್ಟಗೊಳಿಸುವುದಕ್ಕಾಗಿ ಇತರೆ ತಂಡದ ಸದಸ್ಯರಿಗೆ ಗಾಳ ಹಾಕುತ್ತಿದ್ದಾರೆ.

ಹೌದು,ಬಿಗ್ ಬಾಸ್ ಮನೆಯೊಳಗೆ ಹೋದಾಗಿನಿಂದಲೂ ವಿನಯ್ ಮತ್ತು ಪ್ರತಾಪ್ ಮಧ್ಯ ಶೀತಲಸಮರ ನಡೆಯುತ್ತಲೇ ಇತ್ತು. ಅದು ಕೆಲವೊಮ್ಮೆ ಮಾತಿನ ಚಕಮಕಿಗೂ ಇಳಿದಿದ್ದಿದೆ. ಪ್ರತಾಪ್ ಅವರನ್ನು ಅವಕಾಶ ಸಿಕ್ಕಾಗೆಲ್ಲ ಟೀಕಿಸುತ್ತಿದ್ದ, ತೆಗಳುತ್ತಿದ್ದ ವಿನಯ್   ತಮ್ಮ ತಂಡದಲ್ಲಿ ಆಡಲು ಇದೀಗ ಅವರನ್ನು ಹೊಗಳುತ್ತಿದ್ದಾರೆ.

‘ನಿನ್ನ ಬಗ್ಗೆ ಗೌರವ ಹೆಚ್ಚಾಗಿದೆ’ ಅನ್ನುತ್ತಿದ್ದಾರೆ ಹಾಗಾದರೆ ಅಂಥದ್ದೇನು ಬದಲಾವಣೆಯಾಗಿದೆ? ಇದು ಮನಸಾಳದಿಂದ ಹುಟ್ಟಿಕೊಂಡ ಮೆಚ್ಚುಗೆಯಾ ಅಥವಾ ಹೊಸದೊಂದು ಗೇಮ್ ಗೆ ಮುನ್ನುಡಿಯಾ? ಅರ್ಥ ಮಾಡಿಕೊಳ್ಳುವುದು ಕಷ್ಟವೇ.‌ಆದರೆ ಪ್ರತಾಪ್ ಅವರಿಗೆ ಇದು ಕಷ್ಟವೇನಲ್ಲ.‌ ಮೊದಲಿನಿಂದಲೂ ಚಾಣಾಕ್ಷತನದಿಂದಲೇ ಎಲ್ಲರನ್ನೂ ತೂಗಿಸಿಕೊಂಡು ಬಂದಿರುವ ಅವರು, ಈಗ ವಿನಯ್ ಮತ್ತು ಅವರ ತಂಡದಿಂದ ಬಂದಿರುವ ಪ್ರಶಂಸೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂಬುವುದನ್ನು ನಾವು ಇಂದಿನ ಸಂಚಿಕೆ ಪ್ರಸಾರವಾಗುವವರಿಗೂ ಕಾದು ನೋಡಬೇಕಿದೆ.

 

 

Exit mobile version