Site icon PowerTV

ಹಾಸನಾಂಬ ದರ್ಶನಕ್ಕೆ ಇಂದೇ ಕೊನೆಯ ದಿನ: 9 ದಿನಗಳಲ್ಲಿ 5.52 ಕೋಟಿ ಸಂಗ್ರಹ!

ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ಇಂದೇ ಕೊನೆಯ ದಿನವಾಗಿದೆ. ಕೊನೆಯ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತರು ಬರುತ್ತಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಯವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ನಾಳೆ ಶಾಸ್ತ್ರೋಕ್ತವಾಗಿ‌ ಗರ್ಭಗುಡಿ ಬಾಗಿಲನ್ನು ಭಕ್ತರು ಮುಚ್ಚಲಿದ್ದಾರೆ. ನವೆಂಬರ್ 2ರಿಂದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಿತ್ತು. ಈ ಬಾರಿ 12 ದಿನಗಳ ಕಾಲ ಭಕ್ತರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಬಲಿಪಾಡ್ಯಮಿ ಆಚರಣೆ ಏಕೆ ಮತ್ತು ಹೇಗೆ ಗೋತ್ತಾ?

9 ದಿನಗಳಲ್ಲಿ 5.52 ಕೋಟಿ ರೂ ಸಂಗ್ರಹ :

ರಾಜ್ಯದ ಖ್ಯಾತ ಹಾಸನಾಂಬ ದೇಗುಲದಲ್ಲಿ ಭಕ್ತರ ದರ್ಶನ 9ನೇ ದಿನವೂ ಮುಂದುವರೆದಿದ್ದು, ಈ ಅವಧಿಯಲ್ಲಿ ದೇಗುಲದಲ್ಲಿ ಸುಮಾರು 5.52 ಕೋಟಿ ರೂ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಕಳೆದ ಒಂಬತ್ತು ದಿನಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು 1000 ಹಾಗೂ 400 ರೂಪಾಯಿ ಮೌಲ್ಯದ ವಿಶೇಷ ಪ್ರವೇಶ ಚೀಟಿ ಹಾಗೂ ಲಡ್ಡು ಪ್ರಸಾದ ಮಾರಾಟ ಮಾಡಿ 5.52 ಕೋಟಿ ರೂ ಸಂಗ್ರಹಿಸಿದೆ. ಇಂದು ಅಂದರೆ ಮಂಗಳವಾರದವರೆಗೆ ದೇವಸ್ಥಾನ ತೆರೆದಿರುವುದರಿಂದ ಆದಾಯ 6.50 ಕೋಟಿ ದಾಟುವ ಸಾಧ್ಯತೆ ಇದೆ ಎಂದು ಹೇಳಿದೆ.

Exit mobile version