Site icon PowerTV

ಅಂತರ್ ರಾಜ್ಯ ಗಾಂಜಾ ಮಾರಾಟಗಾರರು ಅರೆಸ್ಟ್​!

ತುಮಕೂರು: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅಂತರ ರಾಜ್ಯ ಕಳ್ಳರನ್ನು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಹೆಂಜಾರಪ್ಪ, ಕರಿಯಪ್ಪ, ಚಂದ್ರಶೇಖರ್‌ ಎಂಬುವವರು ಬಂಧಿತ ಆರೋಪಿಗಳಾಗಿದ್ದು, ಖಚಿತ ಮಾಹಿತಿಯ ಮೇರೆಗೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: 450 ರೂ.ಗೆ LPG ಸಿಲಿಂಡರ್ ಘೋಷಣೆ!

ಬಂಧಿತ ಆರೋಪಿಗಳಿಂದ 65 ಸಾವಿರ ರೂ ಬೆಲೆಬಾಳುವ 1 ಕೆ.ಜಿ. 144 ಗ್ರಾಂ ಕಡ್ಡಿ ಬೀಜ ಮಿಶ್ರಿತ ಗಾಂಜಾ ಸೊಪ್ಪು ಹಾಗೂ ಸುಮಾರು 30 ಸಾವಿರ ಬೆಲೆ ಬಾಳುವ 1 ಕೆಜಿ 600 ಗ್ರಾಂ ಹಸಿ ಗಾಂಜಾ ಗಿಡ ಹಾಗೂ ಬೈಕ್ ವಶ ಪಡಿಸಿಕೊಂಡಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version