Site icon PowerTV

ಪತ್ನಿ ಮೇಲೆ ಪತಿಗೆ ಅನುಮಾನ: ಠಾಣೆ ಮೆಟ್ಟಿಲೇರಿದ ಪತ್ನಿ!

ಬೆಂಗಳೂರು: ಪತಿಯು ತನ್ನ ಕಾರಿಗೆ ಜಿಪಿಎಸ್ ಅಳವಡಿಸಿದ್ದಾನೆ ಎಂದು ಪತ್ನಿಯೇ ಪತಿಯ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.

ಎಂಜಲಿನಾ ಗುಪ್ತಾ ಎಂಬಾಕೆ, ತನ್ನ ಪತಿ ಸಂದೀಪ್ ಗುಪ್ತಾ ಮತ್ತು ಅತ್ತೆ ರೀಟಾ ಗುಪ್ತಾ ಮೇಲೆ ದೂರು ನೀಡಿದ್ದಾರೆ. ಅನುಮಾನ ಸ್ವಭಾವ ಹೊಂದಿರುವ ಪತಿ ಸಂದೀಪ್ ಗುಪ್ತಾ ಪ್ರತಿದಿನ ಪತ್ನಿಯೊಡನೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಹಾಸನಾಂಬ ದರ್ಶನಕ್ಕೆ ಇಂದೇ ಕೊನೆಯ ದಿನ: 9 ದಿನಗಳಲ್ಲಿ 5.52 ಕೋಟಿ ಸಂಗ್ರಹ!

ಪತಿ ಮತ್ತು ಅತ್ತೆ ತಮ್ಮ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಎಂಜಲಿನಾ ಗುಪ್ತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಪತಿ ಸಂದೀಪ್ ಗುಪ್ತಾ ಮತ್ತು ಅತ್ತೆ ರೀಟಾ ಗುಪ್ತಾರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Exit mobile version