Site icon PowerTV

ಪ್ರಯಾಣಿಕರ ಗಮನಕ್ಕೆ: ಚೆನ್ನೈನಿಂದ ಹೊರಡುವ ಶಿರಡಿ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ!

ಬೆಂಗಳೂರು: ರೈಲಿನ ಮೂಲಕ ಶಿರಡಿ ತೆರಳುವ ಪ್ರಯಾಣಿಕರ ಗಮನಕ್ಕೆ ದಕ್ಷಿಣ ರೈಲ್ವೆಯೂ ಮಹತ್ವದ ಮಾಹಿತಿಯನ್ನು ನೀಡಿದೆ. ರೈಲುಗಳ ನಿಯಂತ್ರಣ ಮತ್ತು ಹೊರಡುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ಮೇಲ್ಪಾಕ್ಕಂ–ಚಿತ್ತೇರಿ-ಮಹೇಂದ್ರ ವಾಡಿ ರೈಲು ನಿಲ್ದಾಣಗಳ ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆ ಚೆನ್ನೈನಿಂದ ಸಾಯಿನಗರಕ್ಕೆ ಹೊರಡಲಿರುವ ಶಿರಡಿ ಎಕ್ಸ್‌ಪ್ರೆಸ್, ನವೆಂಬರ್ 15 ಮತ್ತು 22ನೇ ತಾರೀಖಿನ ಸಮಯ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: ಮಹಿಳೆಯರಿಗೆ ಸಿಹಿಸುದ್ದಿ: ಶಕ್ತಿ ಯೋಜನೆಯ ಪ್ರಯಾಣ ಮತ್ತಷ್ಟು ಸುಲಭ!

ಚೆನ್ನೈನಿಂದ 10.20 ಗಂಟೆ ಬದಲಾಗಿ 12.20 ಗಂಟೆಗೆ ಶಿರಡಿ ಎಕ್ಸ್‌ಪ್ರೆಸ್ ಹೊರಡಲಿದೆ. ಇನ್ನು, ದಾನಪುರ ಟು SMVT, ಹೌರಾ ಟು SMVT, ಕಾಮಾಖ್ಯ ಟು SMVT, ಪಾಟ್ನಾ ಟು SMVT, ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳನ್ನು ದಿನಾಂಕ ನವೆಂಬರ್ 15 ರಿಂದ 27ರ ವರಗೆ, ದಕ್ಷಿಣ ರೈಲ್ವೆಯ ವಿಭಾಗದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿಯಂತ್ರಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Exit mobile version