Site icon PowerTV

2 ಶತಕ, 5 ಅರ್ಧಶತಕ : ವಿಶ್ವಕಪ್ ಲೀಗ್​ನಲ್ಲಿ ಕಿಂಗ್ ಕೊಹ್ಲಿ ‘ರನ್ ಶಿಖರ’

ಬೆಂಗಳೂರು : ರನ್ ಮೆಷಿನ್ ವಿರಾಟ್‌ ಕೊಹ್ಲಿ ವಿಶ್ವಕಪ್-2023 ಲೀಗ್‌ ಹಂತದಲ್ಲಿ ಅಧಿಕ ರನ್‌ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಆಡಿರುವ 9 ಇನ್ನಿಂಗ್ಸ್‌ಗಳಲ್ಲಿ 2 ಶತಕ, 5 ಅರ್ಧಶತಕ ಸಹಿತ 594 ರನ್ ಚಚ್ಚಿದ್ದಾರೆ.

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್‌ ಡಿ ಕಾಕ್ 591, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ 565, ಭಾರತ ತಂಡದ ನಾಯಕ ರೋಹಿತ್ ಶರ್ಮಾ 503 ರನ್ ಗಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 499 ರನ್ ಸಿಡಿಸಿ ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಶುಭಮನ್ ಗಿಲ್, ಅನಾರೋಗ್ಯ ಕಾರಣ ಟೂರ್ನಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಅವರು 7 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ 3 ಅರ್ಧ ಶತಕ ಸಹಿತ 270 ರನ್ ಕಲೆಹಾಕಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ 34ನೇ ಸ್ಥಾನದಲ್ಲಿ ಉಳಿದಿದ್ದಾರೆ. ಶ್ರೇಯಸ್ ಅಯ್ಯರ್ 421 ರನ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ 347 ರನ್ ಗಳಿಸಿದ್ದಾರೆ.

ಹೀಗಿದೆ ಕಿಂಗ್ ರನ್​ ಬೇಟೆ

ಕಿಂಗ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 85, ಅಫ್ಘಾನಿಸ್ತಾನ ವಿರುದ್ಧ ಅಜೇಯ 55, ಪಾಕಿಸ್ತಾನ್ ವಿರುದ್ಧ 16, ಬಾಂಗ್ಲಾದೇಶದ ವಿರುದ್ಧ ಅಜೇಯ 103, ನ್ಯೂಜಿಲೆಂಡ್ ವಿರುದ್ಧ 95, ಇಂಗ್ಲೆಂಡ್ ವಿರುದ್ಧ 00(ಶೂನ್​), ಶ್ರೀಲಂಕಾ ವಿರುದ್ಧ 88, ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 101 ಹಾಗೂ ನೆದರ್ಲೆಂಡ್ಸ್​ ವಿರುದ್ಧ 51 ರನ್​ ಗಳಿಸಿದ್ದಾರೆ.

ವಿಶ್ವಕಪ್​ನಲ್ಲಿ ಭಾರತದ ಬ್ಯಾಟರ್​ಗಳು

Exit mobile version