Site icon PowerTV

ಉಡುಪಿ ಹತ್ಯೆ: ಟಾಯ್ಲೆಟ್​ ರೂಮ್​​ನಲ್ಲಿ ಅಡಗಿ ಕುಳಿತು ಪ್ರಾಣ ಉಳಿಸಿಕೊಂಡ ಅಜ್ಜಿ!

ಉಡುಪಿ: ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆಯ ವೇಳೆ ಮನೆಯಲ್ಲಿದ್ದ ಅಜ್ಜಿ ಮನೆಯ ಟಾಯ್ಲೆಟ್​ನಲ್ಲಿ ಅಡಗಿ ಕುಳಿತು ಜೀವ ಉಳಿಸಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ದ್ವೇಷವೇ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಫ್ನಾನ್ ಮೇಲಿನ ದ್ವೇಷಕ್ಕೆ ನಾಲ್ವರ ಕೊಲೆ ನಡೆದಿದೆ. ಮನೆಗೆ ಆಗಮಿಸಿದ ಹಂತಕ ನಾಲ್ವರಿಗೆ ಚೂರಿ ಇರಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್​ಗಳು ಯಾವುದು ಗೊತ್ತಾ?

ಈ ವೇಳೆ ಮನೆಯಲ್ಲಿದ್ದ ಅಫ್ನಾನ್​ ಅಜ್ಜಿ ಟಾಯ್ಲೆಟ್ ರೂಮ್​​​ಗೆ ಬಾಗಿಲು ಹಾಕಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಇತರ ನಾಲ್ವರನ್ನು ಕೊಂದು ಅಫ್ನಾನ್​ ಅಜ್ಜಿಯ ಬಳಿಗೆ ಆಗಂತುಕ ಬಂದಿದ್ದ. ಆದರೆ, ಅಪಾಯ ಅರಿತು ಇವರು ಟಾಯ್ಲೆಟ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಇನ್ನು ಹೊರಗಿನಿಂದ ಜನ ಬರಬಹುದು ಎಂದು ತಿಳಿದ ಈತ 15 ನಿಮಿಷದಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.

Exit mobile version