Site icon PowerTV

ದೀಪಾವಳಿ ಆಚರಣೆ: ಗಂಗೊಳ್ಳಿಯಲ್ಲಿ ಏಳು ಬೋಟ್‌ಗಳು ಬೆಂಕಿಗೆ ಆಹುತಿ

ಉಡುಪಿ: ದೀಪಾವಳಿ ಸಂಭ್ರಮ ಎಲ್ಲಾ ಕಡೆಯಲ್ಲೂ ಜೋರಾಗುತ್ತಿದ್ದಂತೆಯೇ ಕೆಲವು ಕಡೆ ಅನಾಹುತಗಳೂ ಸಹಾ ಹೆಚ್ಚುತ್ತಲೇ ಇವೆ.

ಹೌದು,  ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ದೀಪಾವಳಿ ಪ್ರಯುಕ್ತ ಪೂಜೆ ನಡೆಯುತ್ತಿದ್ದ ವೇಳೆ ದುರಂತವೊಂದು ಸಂಭವಿಸಿದೆ.

ಪಟಾಕಿ ಸಿಡಿದು ಬೆಂಕಿ ಹಬ್ಬಿರಬಹುದೇ ಎಂಬ ಸಂಶಯ ಕಾಡಿದೆ. ಸ್ಥಳೀಯ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಗುತ್ತಿದ್ದು, ಬೆಂಕಿಯ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದುರಂತದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ.

ಇದನ್ನೂ ಓದಿ: ಬೊಮ್ಮಾಯಿ ‘ನಿನ್ನ ನೇಮಕದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ’ ಅಂದ್ರು : ಬಿ.ವೈ. ವಿಜಯೇಂದ್ರ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಲಂಗರು ಹಾಕಿದ್ದ ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಏಳು ಬೋಟ್‌ಗಳಿಗೆ ವಿಸ್ತರಿಸಿ ಅವೆಲ್ಲವೂ ಸುಟ್ಟು ಕರಕಲಾಗಿವೆ.

ಇಲ್ಲೇ ಸಮೀಪದಲ್ಲಿ ದೀಪಾವಳಿ ಹಬ್ಬ ಆಚರಣೆ ನಡೆದಿದ್ದು, ದೊಡ್ಡ ಮಟ್ಟದಲ್ಲಿ ಪಟಾಕಿ ಸಿಡಿಸಲಾಗಿದೆ. ಹೀಗೆ ಸಿಡಿಸುವಾಗ ಕಿಡಿ ಬೋಡ್‌ಗೆ ಬಿದ್ದಿರಬಹುದಾ ಎಂಬ ಅನುಮಾನ ಕಾಡಿದೆ. ಇದರ ಬಗ್ಗೆ ತನಿಖೆ ನಡೆಯಬೇಕಾಗಿದೆ.

 

 

 

 

 

Exit mobile version