Site icon PowerTV

ವಂಚಕಿ ಚೈತ್ರಾ ಮೇಲೆ ಖೈದಿಗಳಿಂದ ಹಲ್ಲೆ!

ಬೆಂಗಳೂರು: ಉದ್ಯಮಿಗೆ 5 ಕೋಟಿ ವಂಚಿಸಿ ಜೈಲು ಪಾಲಾಗಿರುವ ವಂಚಕಿ ಚೈತ್ರಾ ಮೇಲೆ ಜೈಲಿನಲ್ಲಿನ ಮಹಿಳಾ ಖೈದಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ವಂಚನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ದಿನಕಳೆಯುತ್ತಿರುವ ಚೈತ್ರ ಮೇಲೆ ಆಫ್ರಿಕನ್ ಮಹಿಳಾ ಖೈದಿಗಳು ಹಲ್ಲೆ ಮಾಡಿರೋ ಮಾಹಿತಿ ಲಭ್ಯವಾಗಿದ್ದು ರಾಷ್ಟ್ರಗೀತೆ ವಿಚಾರದಲ್ಲಿ ಜಗಳ ನಡೆದಿದೆ ಜಗಳ ಹಲ್ಲೆಗೆ ತಿರುಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ 5 ದಿನ ಮಳೆ ಸಾಧ್ಯತೆ, ನೆಮ್ಮದಿ ತಂದ ಹಿಂಗಾರು

ಚೈತ್ರಾ ಹಾಗೂ ಮೂವರು ಸ್ಥಳೀಯ ಖೈದಿಗಳಿ ಮೇಲೆ ಆಫ್ರಿಕನ್ ಮಹಿಳಾ ಕೈದಿಗಳು ಹಲ್ಲೆ ಮಾಡಿರೋ ಮಾಹಿತಿ ದೊರೆತಿದೆ. ಮಹಿಳಾ‌‌ ವಿಚಾರಣಾಧೀನ ಖೈದಿಗಳ ಬ್ಯಾರಕ್​ನಲ್ಲಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಚೈತ್ರಾ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದಾರೆ.

Exit mobile version