ಬಳ್ಳಾರಿ: ನಗರದ ತೋರಣಗಲ್ಲು ಪಟ್ಟಣದಲ್ಲಿ ಪುರಸಭೆ ಸದಸ್ಯ ನಾಗರಾಜ ಎಂಬಾತನ ಮೇಲೆ ಶಿವಕುಮಾರ್ ಎಂಬಾತ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ತೋರಣಗಲ್ಲು ರೈಲು ನಿಲ್ದಾಣ ಬಳಿಯ 11ನೇ ವಾರ್ಡ್ನ ಘೋರ್ಪಡೆ ನಗರದಲ್ಲಿ ಘಟನೆ ನಡೆದಿದೆ. ಘೋರ್ಪಡೆ ನಗರದ HLC ಕಾಲುವೆ ಬಳಿ ಮಚ್ಚಿನಿಂದ ಪುರಸಭೆ ಸದಸ್ಯನ ಮೇಲೆ ಹಲ್ಲೆ ಮಾಡಲಾಗಿದೆ. ಪುರಸಭೆ ಸದಸ್ಯ ನಾಗರಾಜನ ತಲೆ, ಬೆನ್ನು ಹಾಗೂ ಕೈಗಳಿಗೆ ತೀವ್ರ ಗಾಯಗಳಾಗಿವೆ.
ಘಟನೆಯ ವಿವರ
ಗಾಯಾಳು ನಾಗರಾಜ ನಾಯ್ಕ ಹಾಗೂ ಹಲ್ಲೆ ನಡೆಸಿದ ಆರೋಪಿ ಶಿವಕುಮಾರ್ ಇವರಿಬ್ಬರಿಗೂ ಕಳೆದ ವರ್ಷ ಚುನಾವಣೆಯ ನಂತರ ವಾರ್ಡ್‌ನಲ್ಲಿನ ಚರಂಡಿಯ ವಿಚಾರವಾಗಿ ಗಲಾಟೆ ನಡೆದಿತ್ತು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿ ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ.
ಇದನ್ನೂ ಓದಿ: 6ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ!
ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಕಾಲುವೆಯ ಬಳಿ ಇಬ್ಬರಿಗೂ ಜಗಳ ನಡೆದು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡರು. ಕೋಪಗೊಂಡ ಆರೋಪಿ ಶಿವಕುಮಾರ್ ಮಚ್ಚು ತೆಗೆದುಕೊಂಡು ಬಂದು ನಾಗರಾಜ ನಾಯ್ಕ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.



Pinco oyun saytında çox sayda bonus var. Yeni istifadəçilər üçün bonuslar artıq buradadır: https://pinkoaz.website.yandexcloud.net/. Pinco azərbaycan domeni təhlükəsiz işləyir.
Pinco oyunçuları üçün xoş təcrübə yaradır.