Site icon PowerTV

ಯುವತಿಯ ಬಟ್ಟೆ ಎಳೆದು ಕಾಮುಕ ಅಟ್ಟಹಾಸ!

ಬೆಂಗಳೂರು: ನಡುರಸ್ತೆಯಲ್ಲೇ ಯುವತಿಯ ಬಟ್ಟೆ ಎಳೆದು ಕಾಮುಕ ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರು ಸೌತ್ ಎಂಡ್ ಸರ್ಕಲ್ ಬಳಿ ನಡೆದಿದೆ.

ರಾತ್ರಿ 10.40ರ ಸುಮಾರಿಗೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಯುವತಿ ಹೋಗ್ತಿದ್ದಳು. ಕೂಡ್ಲುಗೇಟ್​​ನಿಂದ ಬಸವನಗುಡಿ ಕಡೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ 10.40ರ ವೈಟ್ ಸ್ವೆಟ್ ಶರ್ಟ್ ಧರಿಸಿ, ಹ್ಯಾಟ್ ಧರಿಸಿಕೊಂಡು ಬಂದಿದ್ದ ಅಪರಿಚಿತ, ಯುವತಿಯನ್ನ ಫಾಲೋ ಮಾಡಿದ್ದ ಬಳಿಕ ಸೌತೆಂಡ್ ಸರ್ಕಲ್ ಬಳಿ ಬರ್ತಿದ್ದಂತೆ ಯುವತಿಯ ಬಟ್ಟೆ ಎಳೆದು ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಅಶ್ಲೀಲ ಪದಗಳಿಂದ ಬೈದು ಆರೋಪಿ ಹೋಗಿದ್ದಾನೆ.

ಇದನ್ನೂ ಓದಿ: ನಮ್ಮ ಪಕ್ಷ ಎಂದೂ ಒಂದೇ ಜಾತಿಗೆ ಸೀಮಿತವಾಗಿಲ್ಲ : ಸಚಿವ ದಿನೇಶ್ ಗುಂಡೂರಾವ್

ಆರೋಪಿ ಮೇಲೆ ಜಯನಗರ ಠಾಣೆಯಲ್ಲಿ FIR ದಾಖಲಾಗಿದೆ. ಸದ್ಯ ಕೇಸ್ ದಾಖಲಿಸಿ ಪೊಲೀಸರಿಂದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Exit mobile version