Site icon PowerTV

ಫೊಟೊ ಶೂಟ್ ವಿಚಾರಕ್ಕೆ ಜಗಳ: ಯುವಕನ ಕೊಲೆ!

ದೊಡ್ಡಬಳ್ಳಾಪುರ: ಫೋಟೊಶೂಟ್ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮೇಶ್ವರ ಸಮೀಪದ ಡಾಬಾದಲ್ಲಿ ಭಾನುವಾರ ನಡೆದಿದೆ.

ದೊಡ್ಡಬಳ್ಳಾಪುರ ನಗರದ ಕಛೇರಿಪಾಳ್ಯ ನಿವಾಸಿ ಸೂರಿ (19) ಹತ್ಯೆಯಾದ ಯುವಕ. ರಾಮೇಶ್ವರ ಸಮೀಪದ  ಡಾಬಾದ ಮುಂಭಾಗ ಅಲಂಕರಿಸಿದ್ದ ಸೀನರಿ ಬಳಿ ಸೂರಿ ಜತೆ ತೆರಳಿದ್ದ ಮೂರು ಮಂದಿ ಯುವಕರು ಫೋಟೊಶೂಟ್ ಮಾಡುತ್ತಿದ್ದರು, ಈ ವೇಳೆ ಕುಂಟನಹಳ್ಳಿ ಗ್ರಾಮದ ಯುವಕರ ತಂಡ ತಮ್ಮ ಫೋಟೊ ತೆಗೆಯುವಂತೆ ಹೇಳಿದ್ದಾರೆ. ಈ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕ ಸೂರ್ಯನ ಎದೆಗೆ ಹರಿತವಾದ ಕೀ ಚೈನ್‌ನಿಂದ ಎದುರಾಳಿ ತಂಡ ಚುಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೀಪಾವಳಿ ಪಟಾಕಿ ಅವಘಡ: ಒಂದೇ ದಿನ 22 ಜನ ಆಸ್ಪತ್ರೆಗೆ​ ದಾಖಲು!

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡ, ಎಎಸ್ಪಿ ಪುರುಷೋತ್ತಮ್, ಮತ್ತು ಡಿವೈಎಸ್​ ಪಿ ರವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೊಡ್ಡಬೆಳವಂಗಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version