Site icon PowerTV

ಕುಮಾರಸ್ವಾಮಿಗೆ ಬಡವರು, ಹೆಣ್ಣುಮಕ್ಕಳ ನೋವು ಗೊತ್ತಿಲ್ಲ : ಡಿ.ಕೆ. ಶಿವಕುಮಾರ್

ಬೆಂಗಳೂರು : ಕುಮಾರಸ್ವಾಮಿಗೂ ಕಾಂಗ್ರೆಸ್​ ಗ್ಯಾರಂಟಿಗಳಿಗೂ ಏನು ಸಂಬಂಧ? ಕುಮಾರಸ್ವಾಮಿಗೆ ಏನು ಗೊತ್ತಿದೆ ನಮ್ಮ ಗ್ಯಾರಂಟಿ ಬಗ್ಗೆ? ಅವರೇನು ಗ್ಯಾರಂಟಿ ಫಲಾನುಭವಿನಾ? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್​ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿಗೆ ಅವರ ಪಂಚರತ್ನ ಯೋಜನೆ ಇಂಪ್ಲಿಮೆಂಟ್ ಮಾಡಲು ಆಗಲಿಲ್ಲ. ನಮ್ಮ ಗ್ಯಾರಂಟಿಗಳು ಜನರಿಗೆ ತಲುಪಿದೆಯೋ ಇಲ್ಲ ಅಂತ ಮತದಾರರನ್ನ ಕೇಳಬೇಕು. ಚನ್ನಪಟ್ಟಣ ಮತದಾರರ ಜೊತೆ ನಾನೇ ಮಾತನಾಡಿದ್ದೇನೆ. ಅವರನ್ನು ಕೇಳಿದ್ರೆ ಕುಮಾರಸ್ವಾಮಿಗೆ ಗೊತ್ತಾಗುತ್ತೆ ಎಂದು ಕುಟುಕಿದ್ದಾರೆ.

ಕುಮಾರಸ್ವಾಮಿ ಅರ್ಜೆಂಟ್ ಅಲ್ಲಿ ಇದ್ದಾರೆ

5% ಮಾತ್ರ ಗೃಹಲಕ್ಷ್ಮೀ ತೊಂದರೆ ಆಗಿದೆ. ಪಾಪ ಅವರು ಮಾತನಾಡುತ್ತಿದ್ದಾರೆ ಮಾತನಾಡಲಿ. ಕುಮಾರಸ್ವಾಮಿಗೆ ಬಡವರು, ಹೆಣ್ಣುಮಕ್ಕಳ ನೋವು ಗೊತ್ತಿಲ್ಲ. ಖುಷಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದಸರಾಗೆ ಬಂದಿದ್ದ ಜನರು ನೋಡಿದ್ರೆ ಗೋತ್ತಾಗುತ್ತೆ. ಕುಮಾರಸ್ವಾಮಿ ಬಹಳ ಅರ್ಜೆಂಟ್ ಅಲ್ಲಿ ಇದ್ದಾರೆ. ಸುಮ್ಮನೆ ಸಚಿವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಚಾಟಿ ಬೀಸಿದ್ದಾರೆ.

Exit mobile version