Site icon PowerTV

ಮಾಜಿ ಶಾಸಕರ ಜೇಬಿಗೆ ಕತ್ತರಿ ಹಾಕುವಾಗಲೇ ಬಿತ್ತು ಗೂಸಾ!

ತುಮಕೂರು: ಸಿದ್ದಗಂಗಾ ಮಠದಲ್ಲಿ ಮಾಜಿ ಶಾಸಕ ಮಸಾಲೆ ಜಯರಾಮ್ ಕಿಸೆಯಲ್ಲಿದ್ದ ಹಣವನ್ನೇ ಎಗರಿಸಲು ಚಾಲಾಕಿ ಕಳ್ಳ ಯತ್ನಿಸಿ ಭರ್ಜರಿ ಗೂಸಾ ತಿಂದ ಘಟನೆ ಭಾನುವಾರ ನಡೆದಿದೆ.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ B.Y.ವಿಜಯೇಂದ್ರ ಭೇಟಿ ನೀಡಿದ್ದು, ವಿಜಯೇಂದ್ರ ಅವರನ್ನ ಬರ ಮಾಡಿಕೊಳ್ಳಲು ಮಾಜಿ ಶಾಸಕ ಮಸಾಲೆ ಜಯರಾಮ್ ಬಂದಿದ್ದರು. ಈ ವೇಳೆ ಮಸಾಲೆ ಜಯರಾಮ್ ಕಿಸೆಗೆ ಕತ್ತರಿ ಹಾಕಲು ಕಳ್ಳ ಹೊರಟಿದ್ದ. ಪಿಕ್ ಪಾಕೆಟ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: ಮತ್ತೊಂದು ದೇವರ ಮೊಸಳೆ ಪ್ರತ್ಯಕ್ಷ!

ಜೇಬಿಗೆ ಕೈ ಹಾಕಿ ಕಂತೆ ಹಣ ಎತ್ತುತ್ತಿರುವುದನ್ನು ಅವರ ಹಿಂಬಾಲಕರು ಗಮನಿಸಿದ್ದು ತಕ್ಷಣ ಹಿಡಿದು ಕಳ್ಳನಿಗೆ ಗೂಸಾ ನೀಡಿದ್ದಾರೆ. ಬಳಿಕ ಕಳ್ಳನನ್ನು ಸ್ಥಳದಲ್ಲೇ ಇದ್ದ ಪೊಲೀಸರಿಗೆ ಒಪ್ಪಿಸಿದ್ದಾರೆ.

Exit mobile version