Site icon PowerTV

ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಂದ ಕಿರಾತಕ!

ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆಗೈದು ದುಷ್ಕರ್ಮಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉಡುಪಿಯ ಸಂತೆಕಟ್ಟೆ ನೇಜಾರು ಸಮೀಪ ನಡೆದಿದೆ.

ತಾಯಿ ಹಾಗೂ ಮೂವರು ಮಕ್ಕಳನ್ನು ದುಷ್ಕರ್ಮಿ ಕೊಲೆಗೈದಿದ್ದಾನೆ. ಮೃತರನ್ನು ತಾಯಿ ಹಸೀನಾ, ಮಕ್ಕಳಾದ ಅಫ್ನಾನ್, ಅಯ್ನಝ್, ಆಸಿಂ ಎಂದು ಗುರುತಿಸಲಾಗಿದೆ. ಹರಿತವಾದ ಆಯುಧಗಳಿಂದ ಇರಿದು ನಾಲ್ವರನ್ನು ಕೊಲೆ ಮಾಡಿದ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಮಾಜಿ ಶಾಸಕರ ಜೇಬಿಗೆ ಕತ್ತರಿ ಹಾಕುವಾಗಲೇ ಬಿತ್ತು ಗೂಸಾ!

ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿ ಮಾತಿನ ಚಕಮಕಿ ನಡೆಸಿದ್ದಾನೆ. ಮೊದಲು ಹಸೀನಾ, ಅಫ್ನಾನ್ ಹಾಗೂ ಅಯ್ನಾಝ್‌ಗೆ ಇರಿದಿದ್ದಾನೆ. ಈ ವೇಳೆ ಹೊರಗಡೆ ಆಟವಾಡುತ್ತಿದ್ದ ಆಸಿಂ ಸದ್ದು ಕೇಳಿ ಮನೆ ಒಳಗಡೆ ಬಂದಿದ್ದಾನೆ. ನಂತರ ಕಿರಿಯ ಮಗನನ್ನೂ ಕೊಂದಿದ್ದಾನೆ. ಇದಾದ ಬಳಿಕ ಗಲಾಟೆ ಕೇಳಿ ಪಕ್ಕದ ಮನೆಯ ಯುವತಿ ತನ್ನ ಮನೆಯಿಂದ ಹೊರ ಬಂದಿದ್ದಾಳೆ. ದುಷ್ಕರ್ಮಿ ಆಕೆಯನ್ನೂ ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Exit mobile version