Site icon PowerTV

ಐದು ತಿಂಗಳು ಪೂರೈಸಿದ ‘ಶಕ್ತಿ’ ಯೋಜನೆ : ಈವರೆಗೆ 2,218 ಕೋಟಿ ಖಾಲಿ

ಬೆಂಗಳೂರು : ಕಾಂಗ್ರೆಸ್​ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಶಕ್ತಿ ಯೋಜನೆ ಜಾರಿಯಾಗಿ 5 ತಿಂಗಳು ಪೂರೈಸಿದೆ.

ಶಕ್ತಿ ಯೋಜನೆ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಯೋಜನೆಯಾಗಿದೆ. ಶಕ್ತಿ ಯೋಜನೆ ಜೂನ್ 11 ರಂದು ಜಾರಿಯಾಗಿತ್ತು. ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ ಮುಂಭಾಗ ಸರ್ಕಾರ ಯೋಜನೆಗೆ ಚಾಲನೆ‌ ಕೊಟ್ಟಿತ್ತು. ಸಿಎಂ‌ ಸಿದ್ದರಾಮಯ್ಯ ಬಸ್​ನಲ್ಲಿ ಪ್ರಯಾಣಿಸಿ ಮಹಿಳೆಯರಿಗೆ ಟಿಕೆಟ್ ವಿತರಿಸಿದ್ದರು.

ಉಚಿತ್ ಬಸ್ ಪ್ರಯಾಣ ಯೋಜನೆ ಜಾರಿಯಾದಾಗಿನಿಂದ ಇದುವರೆಗೂ 93 ಕೋಟಿ 41 ಲಕ್ಷದ 32 ಸಾವಿರದ 728 ಜನ ಮಹಿಳಾ‌ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ರಾಜ್ಯದ ಮಹಿಳೆಯರಿಂದ ಶಕ್ತಿ ಯೋಜನೆಗೆ ಅದ್ಭುತ ರೆಸ್ಪಾನ್ಸ್​ ಸಿಕ್ಕಿದೆ. ಶಕ್ತಿ ಯೋಜನೆಗೆ ಸರ್ಕಾರ 2,800 ಕೋಟಿ ಮೀಸಲಿಟ್ಟಿತ್ತು. ಮೀಸಲಿಟ್ಟ ಹಣದಲ್ಲಿ 2,218 ಕೋಟಿ ಈ‌ಗಾಗಲೇ ಖಾಲಿಯಾಗಿದೆ.

ನಿಜ ಹಿಂದೂಗಳ ರಕ್ಷಣೆ, ಅಭಿವೃದ್ಧಿಗೆ ಬದ್ಧ

ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡುವ ಜೊತೆ ಜೊತೆಗೆ ಅಸಲಿ ಹಿಂದುತ್ವಕ್ಕೆ ಶಕ್ತಿ ತುಂಬಿದೆ. ಎಲ್ಲಾ ಹಿಂದೂ ದೇಗುಲಗಳು, ಪುಣ್ಯಕ್ಷೇತ್ರಗಳು ತುಂಬಿ ತುಳುಕುತ್ತಿವೆ. ನಮ್ಮ ದೇವರ ಪೂಜಿಸಿ, ಪ್ರೀತಿಸುವುದು, ಇತರ ಧರ್ಮೀಯರನ್ನು ಗೌರವಿಸುವವನೇ ನಿಜವಾದ ಹಿಂದೂ. ಇದು ಈಗ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ನಿಜ ಹಿಂದೂಗಳ ರಕ್ಷಣೆ, ಅಭಿವೃದ್ಧಿಗೆ ಕಾಂಗ್ರೆಸ್ ಸದಾ ಬದ್ಧ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಕ್ತಿ ಯೋಜನೆ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿದ್ದರು.

Exit mobile version