Site icon PowerTV

ಸಿದ್ದಗಂಗಾ ಮಠಕ್ಕೆ B.Y.ವಿಜಯೇಂದ್ರ: ಸ್ವಾಗತ ಕೋರಲು ಬಿಜೆಪಿ ಸಜ್ಜು!

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬಿ.ವೈ ವಿಜಯೇಂದ್ರ ತುಮಕೂರು ಸಿದ್ದಗಂಗ ಮಠಕ್ಕೆ ಇಂದು ಬೇಟಿಯಾಗಲಿದ್ದಾರೆ.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಮುನ್ನಾ ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದರು. ನಮ್ಮ ತಂದೆಯವರು ಯಾವುದೇ ಒಳ್ಳೆಯ ಕಾರ್ಯ ಮಾಡುವ ಮುನ್ನ ಪರಮಪೂಜ್ಯ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಮುಂದಿನ ಕೆಲಸ ಮಾಡುತ್ತಿದ್ದರು. ಇದೀಗ ನಾನು ಅವರ ಮಾರ್ಗದರ್ಶನದಂತೆ ಸಿದ್ದಗಂಗಾಶ್ರೀಗಳ ಭೇಟಿಗೆ ಹೊರಟಿದ್ದೇನೆ ಬಳಿಕ ಮನೆ ದೇವರು ಯಡಿಯೂರಿಗೆ ಭೇಟಿ ನೀಡಲಿದ್ದೇನೆ ಎಂದರು.

ಇದನ್ನೂ ಓದಿ: ಮತ್ತೊಂದು ದೇವರ ಮೊಸಳೆ ಪ್ರತ್ಯಕ್ಷ!

ಈಗಾಗಲೇ ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷರ ಆಯ್ಕೆಯಾಗಿದ್ದು ವಿರೋಧ ಪಕ್ಷದ ಆಯ್ಕೆಯ ನಂತರ ದೆಹಲಿ ಭೇಟಿ ಮಾಡಲಿದ್ದೇವೆ ಈ ಕುರಿತು ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.

ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿಗೆ ಸಿದ್ದತೆ:

ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ B.Y.ವಿಜಯೇಂದ್ರ ಭೇಟಿ ನೀಡುವ ಹಿನ್ನೆಲೆ  ತುಮಕೂರು ಜಿಲ್ಲಾ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಸಿದ್ದಗಂಗಾ ಮಠಕ್ಕೆ ಹೋಗುವ ಪ್ರತಿ ಮಾರ್ಗದಲ್ಲೂ ಸ್ವಾಗತದ ಬ್ಯಾನರ್ ಪ್ಲೆಕ್ಸ್ ಕಟ್ಟಿದ್ದಾರೆ. ವಿಜಯೇಂದ್ರ ಬರುವ ಮಾರ್ಗದ ಎರಡು ಬದಿಯಲ್ಲಿಯೂ ಬ್ಯಾನರ್ ಕಟ್ಟಿ ಸ್ವಾಗತ ಕೋರಲಾಗಿದೆ.

Exit mobile version