ಹಣ ಕೇಳಿದ್ದಕ್ಕೆ ಮಾಲೀಕನ ಮೇಲೆ ಕಾದ ಎಣ್ಣೆ ಎರಚಿದ ಗ್ರಾಹಕ!

ರಾಯಚೂರು: ಹೋಟೆಲ್​ನಲ್ಲಿ ಬೆಳಗ್ಗಿನ ತಿಂಡಿ ತಿಂದ ಬಳಿಕ ಗ್ರಾಹಕ ಹಣ ನೀಡದೇ ​ಮಾಲೀಕನೊಂದಿಕೆ ಕಿರಿಕ್​ ಶುರು ಮಾಡಿ ಮಾಲೀಕನ ಮೇಲೆ ಬಿಸಿ ಎಣ್ಣೆ ಸುರಿದು ವಿಕೃತಿ ಮೆರೆದಿರುವ ಘಟನೆ ಮಾನ್ವಿ ತಾಲೂಕಿನ ರಾಜೋಳ್ಳಿಯಲ್ಲಿ ನಡೆದಿದೆ.

ತಿಂಡಿ ತಿಂದ ಬಳಿಕ ಗ್ರಾಹಕ ಭೀಮಾ ನಾಯಕ ಬಳಿ 20 ರೂ. ಪಾವತಿಸುವಂತೆ ಮಾಲಿಕ ರಂಗಯ್ಯ ಕೇಳಿದ್ದಾನೆ. ಹಣ ಕೇಳಿದಕ್ಕೆ ಕೋಪಗೊಂಡ ಬೀಮಾ ನಾಯಕ ಮಾಲೀಕ ರಂಗಯ್ಯ ಶೆಟ್ಟಿ ಮುಖ ಮತ್ತು ಮೈಗೆ ಸುಡುವ ಎಣ್ಣೆ ಎರಚಿ ದರ್ಪ ತೋರಿದ್ದಾನೆ.

ಇದನ್ನೂ ಓದಿ: ಪಟಾಕಿ ಅವಘಡ ಹಿನ್ನೆಲೆ; ಆಸ್ಪತ್ರೆಗಳು ಅಲರ್ಟ್​​!

ಗಾಯಗೊಂಡ ರಂಗಯ್ಯ ಶೆಟ್ಟಿಯನ್ನ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES