ಮಕರಜ್ಯೋತಿ ಯಾತ್ರೆಗೆ ಶಬರಿಮಲೆ ಸಜ್ಜು : ತಿರುಪತಿ ಮಾದರಿ ಸರತಿ ಸಾಲು ವ್ಯವಸ್ಥೆ

ಬೆಂಗಳೂರು : ಪ್ರಸಿದ್ಧ ಧಾರ್ಮಿಕ ಕ್ಷೇತ್ರ ‘ಶಬರಿಮಲೆ’ಯಲ್ಲಿನ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತರ ಅಪಾರ ಪ್ರಮಾಣದ ದಟ್ಟಣೆ ನಿಯಂತ್ರಿಸಲು ನೂತನ ತಂತ್ರಜ್ಞಾನ ಆಧರಿತ, ತಿರುಪತಿಯ ಮಾದರಿ ಸರತಿ ಸಾಲು ವ್ಯವಸ್ಥೆ ಜಾರಿಗೆ ಸಿದ್ಧತೆ ಶುರುವಾಗಿದೆ.

ಈ ಬಾರಿ ನವೆಂಬರ್‌ 10 ಹಾಗೂ 11 ರಂದು ಶ್ರೀ ಚಿತ್ರಅಟ್ಟ ತಿರುನಲ್‌ ಪೂಜೆಗೆ ತೆರೆದಿತ್ತು. ಬಳಿಕ ನವೆಂಬರ್‌ 16 ರಂದು ಮಂಡಲ ಪೂಜೆಗೆ ತೆರೆಯಲಿದ್ದು, ಡಿಸೆಂಬರ್‌ 27ವರೆಗೂ ಸೇವೆ ನಡೆಯಲಿವೆ. ಆ ಬಳಿಕ 2024 ಜನವರಿ 15 ರಿಂದ 20 ವರೆಗೂ ದರ್ಶನ ಸಿಗಲಿದೆ. ಕಳೆದ ಋುತುವಿನಲ್ಲಿನ ಜನದಟ್ಟಣೆ ಪರಿಗಣಿಸಿ, ಈ ಬಾರಿ ನೂತನ ತಂತ್ರಜ್ಞಾನ ಆಧರಿತ ಸರತಿ ಸಾಲು ವ್ಯವಸ್ಥೆ ಜಾರಿಗೆ ತರಲಾಗಿದೆ.

ಪೊಲೀಸರ ನೆರವಿನೊಂದಿಗೆ ದೇವಸ್ಥಾನದ ಆಡಳಿತ ನಿರ್ವಹಣೆ ಹೊತ್ತಿರುವ ‘ದೇವಸ್ವಂ ಮಂಡಳಿ’ ಜಾರಿಗೆ ತಂದಿರುವ ಈ ಹೊಸ ವ್ಯವಸ್ಥೆಯನ್ನು ಮಂಡಲ ಕಾಲದ ಪೂಜೆಗೆ ದೇಗುಲ ತೆರೆಯುವ ಮುನ್ನವೇ ಮಂದಿರದ ಆವರಣದಲ್ಲಿ ಪೂರ್ಣರೂಪದಲ್ಲಿ ಅಳವಡಿಕೆ ಮಾಡಲಾಗುವುದು.

19.50 ಲಕ್ಷ ವೆಚ್ಚದಲ್ಲಿ ವ್ಯವಸ್ಥೆ

ತಿರುವನಂತಪುರಂ ಮೂಲದ ‘ರೆಡ್‌ ಕ್ಲಿಕ್‌ ಇನ್ಫೋಟೆಕ್‌’ ಕಂಪನಿ 19.50 ಲಕ್ಷ ರೂ. ವೆಚ್ಚದಲ್ಲಿ ಸರತಿ ಸಾಲಿನ ವ್ಯವಸ್ಥೆ ಮಾಡಲಿದೆ. ಮರಕ್ಕೂಟ್ಟಂ ಮತ್ತು ಶರಂಗುತಿ ನಡುವೆ ಕಳೆದ 8 ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದಿರುವ ಆರು ಕ್ಯೂ ಕಾಂಪ್ಲೆಕ್ಸ್‌ಗಳಲ್ಲಿ ಸರತಿ ಸಾಲಿನ ವ್ಯವಸ್ಥೆಗೆ ಅಗತ್ಯ ಮೂಲಸೌಕರ್ಯ ಅಳವಡಿಸಲಾಗುವುದು.

RELATED ARTICLES

Related Articles

TRENDING ARTICLES