Site icon PowerTV

ತೆಲಂಗಾಣ ಸಿಎಂ ಕೆಸಿಆರ್​ ಕೋಟ್ಯಾಂತರ ಮೌಲ್ಯದ ಆಸ್ತಿ ಘೋಷಣೆ!

ತೆಲಂಗಾಣ: ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಕುಟುಂಬವು ಸುಮಾರು 759 ಕೋಟಿ ಮೌಲ್ಯದ ಆಸ್ತಿ ಹೊಂದಿದೆ ಎಂದು ಘೋಷಿಸಿದ್ದಾರೆ.

ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರು ಸ್ವಂತ ಕಾರು ಸಹ ಹೊಂದಿಲ್ಲ. ಅವರ ವಿರುದ್ಧ ಒಂಬತ್ತು ಪ್ರಕರಣಗಳು ಬಾಕಿ ಉಳಿದಿವೆ. ಎಲ್ಲವೂ ತೆಲಂಗಾಣ ರಾಜ್ಯ ಆಂದೋಲನದ ಸಮಯದಲ್ಲಿ ದಾಖಲಾಗಿವೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಮತ್ತೆ ಪ್ರೆಗ್ನೆಂಟ್: ವದಂತಿಗಳ ನಡುವೆ ಬೇಬಿ ಬಂಪ್ ವೀಡಿಯೋ ವೈರಲ್!

ಇನ್ನೂ ಕೆಸಿಆರ್​ ಪತ್ನಿ ಶೋಭಾ ಅವರ ಹೆಸರಿನಲ್ಲಿರುವ ಒಟ್ಟು ಚರಾಸ್ತಿಗಳ ಮೌಲ್ಯವು ಏಳು ಕೋಟಿಗಿಂತ ಹೆಚ್ಚಿದ್ದು, ಅವರ ಅವಿಭಜಿತ ಕುಟುಂಬದ ಹೆಸರಿನಲ್ಲಿ ಒಂಬತ್ತು ಕೋಟಿ ಮೌಲ್ಯದ ಚರಾಸ್ತಿ ಇದೆ. ಪತ್ನಿ ಶೋಭಾ ಬಳಿ ಸುಮಾರು 31.5 ಕೋಟಿ ಮೌಲ್ಯದ 2.81 ಕೆಜಿ ಚಿನ್ನಾಭರಣ, ವಜ್ರ ಮತ್ತು ಇತರ ಬೆಲೆಬಾಳುವ ವಸ್ತುಗಳು ಇವೆ. ರಾವ್ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 18.50 ಕೋಟಿಗಳಾಗಿದ್ದು, ಅವಿಭಜಿತ ಕುಟುಂಬದ ಹೆಸರಿನಲ್ಲಿ ಸುಮಾರು 115ಕೋಟಿ ಮೌಲ್ಯದ ಆಸ್ತಿ ಇದೆ.

Exit mobile version