Site icon PowerTV

ರಾಜಕೀಯ ನಿವೃತ್ತಿ ಸ್ವಂತ ತೀರ್ಮಾನ, ಯಾವುದೇ ಒತ್ತಡ ಇರಲಿಲ್ಲ: ಸದಾನಂದಗೌಡ

ಬೆಂಗಳೂರು: ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಯಾರ ಜೊತೆಯೂ ಚರ್ಚಿಸಿಲ್ಲ. ನಿವೃತ್ತಿಗೆ ಯಾರೂ ಒತ್ತಡ ಹಾಕಿಲ್ಲ. ಇದು ನನ್ನ ಸ್ವಂತ ನಿರ್ಧಾರ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಾಸ್ತವವಾಗಿ ನಿನ್ನೆ ರಾಷ್ಟ್ರೀಯ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ನವರು ಟ್ವೀಟ್ ಮಾಡಿದರು. ನನಗೆ ಎದೆ ಬಗೆದು ತೋರಿಸಲು ಆಗೋದಿಲ್ಲ. ನನಗೆ ಯಾವುದೇ ಒತ್ತಡ ಬಂದಿಲ್ಲ.

ನಿವೃತ್ತಿ ವಿಚಾರವನ್ನು ನನ್ನ ಹೆಂಡತಿ ಮಕ್ಕಳು ಬಿಟ್ಟರೇ ಜೊತೆ ಬಿಟ್ಟರೇ ಯಾರೋದಿಂಗೂ ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಅದಕ್ಕೆ ನನ್ನ ನಿಲುವು ಮನೆಯವರಿಗೆ ಬಿಟ್ಟರೇ ಯಾರಿಗೂ ಗೊತ್ತಿಲ್ಲ. ಸದಾನಂದ ಗೌಡರಿಗೆ ಸೀಟು ಕೊಡಲ್ಲ ಎಂದು ಹೈಕಮಾಂಡ್ ಹೇಳಿದೆ ಅಂತ ಸುದ್ದಿಯಾಗ್ತಿದೆ. ನಿವೃತ್ತಿ ಘೋಷಣೆ ಆದ ಮೇಲೆ ಹೈಕಮಾಂಡ್ ‌ನನ್ನನ್ನು ಸಂಪರ್ಕ ಮಾಡಿಲ್ಲ ಎಂದರು

 

Exit mobile version