Site icon PowerTV

Na Kolikke Ranga Review : ಅಮ್ಮ-ಮಗನ ಬಾಂಧವ್ಯ.. ಭವ್ಯ-ಆನಂದ್ ಮಿಂಚು

ಬೆಂಗಳೂರು : ನಾ ಕೋಳಿಕ್ಕೆ ರಂಗ.. ದೀಪಾವಳಿ ಸಂಭ್ರಮ ಹೆಚ್ಚಿಸಲು ಇಂದು ತೆರೆಕಂಡ ಮತ್ತೊಂದು ಕನ್ನಡದ ಸಿನಿಮಾ. ಮೆಜೆಸ್ಟಿಕ್​​ನಲ್ಲಿ ಅನ್ನದಾತರಾಗಿ ಗುರುತಿಸಿಕೊಂಡಿರುವ ಸೋಮಶೇಖರ್, ಒಂದೊಂದು ರೂಪಾಯಿಯನ ಕೂಡಿಟ್ಟು ಮಾಡಿರುವ ಚಿತ್ರ. ಮಾಸ್ಟರ್ ಆನಂದ್ ಹಾಗೂ ಅಭಿನೇತ್ರಿ ಭವ್ಯ ನಟನೆಯ ಈ ಸಿನಿಮಾ ಹೇಗಿದೆ? ಪ್ರೇಕ್ಷಕರು ಏನಂದ್ರು? ಎಷ್ಟು ಸ್ಟಾರ್ ರೇಟಿಂಗ್? ಇಲ್ಲಿದೆ ನೋಡಿ ಫುಲ್ ಡೀಟೈಲ್ಸ್.

ನಾ ಕೋಳಿಕ್ಕೆ ರಂಗ.. ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು, ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಹೊಸ ಪ್ರತಿಭೆಗಳೇ ಕೂಡಿ ಮಾಡಿರುವ ಸಿನಿಮಾ. ಗೊರವಾಲೆ ಮಹೇಶ್ ನಿರ್ದೇಶನದಲ್ಲಿ ಮಾಸ್ಟರ್ ಆನಂದ್ನ ಟನಾಗಿ ಬಣ್ಣ ಹಚ್ಚಿದ್ದು, ತಾಯಿ ಪಾತ್ರದಲ್ಲಿ ಹಿರಿಯ ನಟಿ ಭವ್ಯ ಮಿಂಚಿದ್ದಾರೆ. ಅಲ್ಲದೆ, ಹೊನ್ನವಳ್ಳಿ ಕೃಷ್ಣ, ಶೋಭರಾಜ್, ಬಿರಾದಾರ್, ರಾಕ್​ಲೈನ್ ಸುಧಾಕರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಕಲ್ಲಿನಕೋಟೆ ಚಿತ್ರದುರ್ಗದಿಂದ ಬಂದು ಮೆಜೆಸ್ಟಿಕ್​ನಲ್ಲಿ ನಾಲ್ಕೈದು ಮೊಬೈಲ್ ಕ್ಯಾಂಟೀನ್​ಗಳನ್ನ ನಡೆಸುತ್ತಿರುವ ಎಸ್.ಟಿ. ಸೋಮಶೇಖರ್, ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಅಂದಹಾಗೆ ಇವರ ಮಗಳು ರಾಜೇಶ್ವರಿಯೇ ಈ ಚಿತ್ರದ ಕಥಾನಾಯಕಿ. ಈಕೆ ಈ ಚಿತ್ರದಿಂದ ಭರವಸೆಯ ನಟಿ ಅನಿಸಿಕೊಂಡಿದ್ದಾರೆ.

ಅಮ್ಮನಷ್ಟೇ ಕೋಳಿಯನ್ನೂ ಪ್ರೀತಿಸೋ ನಟ ರಂಗ, ಒಮ್ಮೆ ಪಟೇಲರ ತೋಟದಲ್ಲಿ ಕೆಲಸ ಮಾಡುವ ವೇಳೆ ಬೆಂಕಿಯನ್ನ ಕಂಡು ದೆವ್ವ ಅಂತ ಹೆದರಿ ಅನಾರೋಗ್ಯಕ್ಕೆ ಜಾರುತ್ತಾನೆ. ನಂತರ ಆತನ ಆರೋಗ್ಯ ಸರಿಹೊಂದಲು ಅವರ ತಾಯಿ ಪೂಜಾರರ ಮಾತಿನಂತೆ ಊರ ದೇವಿಗೆ, ಮಗ ಜೊತೆಯೇ ಸದಾ ಇರುವ ಕೋಳಿಯನ್ನ ಬಲಿ ಕೊಡಲು ಹರಕೆ ಹೊರುತ್ತಾಳೆ. ಕೊನೆಗೆ ಆ ಕೋಳಿಯನ್ನ ಬಲಿ ಕೊಡ್ತಾರಾ? ಇಲ್ವಾ? ಅನ್ನೋದೇ ಚಿತ್ರದ ಅಸಲಿ ಕಥಾನಕ.

ಪ್ರೇಕ್ಷಕರಿಗೆ ನಗುವಿನ ಕಚಗುಳಿ

ಮೊದಲಾರ್ಧ ನಕ್ಕು ನಲಿಸಿದ್ರೆ, ದ್ವಿತಿಯಾರ್ಧ ಎಮೋಷನಲಿ ನೋಡುಗರ ಕಣ್ಣಂಚಲ್ಲಿ ನೀರು ತರಿಸುತ್ತೆ. ಅದರಲ್ಲೂ ಮನರಂಜನೆಯನ್ನಷ್ಟೇ ಟಾರ್ಗೆಟ್ ಮಾಡದ ಚಿತ್ರತಂಡ, ನಂಬಿಕೆ, ಮೂಢನಂಬಿಕೆ, ಪ್ರಾಣಿಗಳನ್ನ ಪ್ರೀತಿಸುವ ಪರಿ, ಶಿಕ್ಷಣ ವ್ಯವಸ್ಥೆ ಹೀಗೆ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಿದೆ. ಪಕ್ಕಾ ಹಳ್ಳಿ ಸೊಗಡಿನ ಪೈಸಾ ವಸೂಲ್ ಮೂವಿಯಾಗಿ ನಾ ಕೋಳಿಕ್ಕೆ ರಂಗ ಮೂಡಿಬಂದಿದೆ.

ರಾರಾಜಿಸಿದ ಅಪ್ಪು ಕಟೌಟ್

ಚಿತ್ರಕ್ಕೆ ರಾಜು ಎಮ್ಮಿಗನೂರು ಸಂಗೀತ ಹಾಗೂ ಹಿನ್ನೆಲೆ ಸಂಗೀತ ಪ್ಲಸ್ ಪಾಯಿಂಟ್. ಅಲ್ಲದೆ, ಪುನೀತ್ ರಾಜ್​ಕುಮಾರ್ ಹಾಡಿರುವ ಟೈಟಲ್ ಸಾಂಗ್ ಅವರ ಕಟ್ಟ ಕಡೆಯ ಹಾಡು ಎನ್ನುವ ಕಾರಣಕ್ಕೆ ನೋಡುಗರಿಗೆ ಕಿಕ್ ಕೊಡಲಿದೆ. ಅಲ್ಲದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಗೀತೆ ಕೂಡ ನೋಡುಗರಿಗೆ ವ್ಹಾವ್ ಫೀಲ್ ನೀಡಲಿದೆ. ಇನ್ನು ತ್ರಿವೇಣಿ ಥಿಯೇಟರ್ ನಲ್ಲಿ ಅಪ್ಪು ಕಟೌಟ್​ ಜೊತೆ ಆನಂದ್ ಕಟೌಟ್ ರಾರಾಜಿಸಿತು. ನಾ ಕೋಳಿಕ್ಕೆ ರಂಗ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್ ಐದಕ್ಕೆ ಮೂರು ಸ್ಟಾರ್. ಒಟ್ಟಾರೆ ಈ ವೀಕೆಂಡ್​​ನಲ್ಲಿ ಸಿನಿಮಾ ನೋಡೋರಿಗೆ ಇದು ಬೆಸ್ಟ್ ಚಾಯ್ಸ್ ಆಗಲಿದೆ.

Exit mobile version