Site icon PowerTV

ನ.15 ಕ್ಕೆ ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ!

ಬೆಂಗಳೂರು: ಚಿತ್ರದುರ್ಗದ ಮುರುಘಾ ಶ್ರೀ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನ.15ಕ್ಕೆ ಮುಂದೂಡಿ ಆದೇಶಿಸಿದೆ.

ಈ ಕುರಿತು ಸ್ವಾಮೀಜಿ ಪರ ವಕಿಲರಾದ ಸಂದೀಪ್ ಪಾಟೀಲ್ ಪ್ರತಿಕ್ರಿಯೆ ನೀಡಿ, ಮುರುಘಾ ಶ್ರೀಗಳಿಗೆ ಜಾಮೀನು ಅರ್ಜಿಗೆ ಸಂಬಂಧಿಸಿ ಮೊದಲ ಪ್ರಕರಣದ ದಾಖಲೆ ಪರಿಶೀಲನೆಯನ್ನು ನಡೆಸಲಿದೆ. ಬಳಿಕ ಕೊಟ್ಟಿರೋ ಶ್ಯೂರಿಟಿ ಪರಿಶೀಲನೆ ನಡೆಸಿ ನಂತರ ಬಿಡುಗಡೆಗೆ ನ್ಯಾಯಾಲಯ ಆದೇಶ ನೀಡಲಿದೆ.  ಮೊದಲನೇ ಪ್ರಕರಣ ಇಟ್ಟುಕೊಂಡು 2ನೇ ಪ್ರಕರಣದಲ್ಲಿ ಜಾಮೀನು ನೀಡಲಿದೆ.

ಇದನ್ನೂ ಓದಿ: ಬೆಳಗಾವಿ ಖತರ್ನಾಕ್ ಸೀರೆಗಳ್ಳರ ಬಂಧನ!

ಎರಡನೇ ಕೇಸ್ ಅಷ್ಟೊಂದು ಊರ್ಜಿತವಲ್ಲ. ಪದೇ ಪದೇ ಇಂತಹ ಕೇಸ್ ಗಳು ಮಾಡ್ತಾ ಹೋಗ್ತಾ ಇದಾರೆ
ಹೀಗಾಗಿ ಈ ಕೇಸ್ ವಜಾ ಮಾಡಿ ಅಂತ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ, ಮೆಡಿಕಲ್ ರಿಪೋರ್ಟ್ ಸ್ವಾಮೀಜಿ ಪರವಾಗಿಯೇ ಬಂದಿದೆ ಬಹುತೇಕ ನವೆಂಬರ್​ 15 ರಂದು ಸ್ವಾಮೀಜಿ ಬಿಡುಗಡೆಯಾಗಲಿದ್ದಾರೆ ಅನ್ನೋ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

Exit mobile version