Site icon PowerTV

ಗೊಂಬೆ ಗ್ಯಾಂಗ್​​​​ ಆಟ್ಟಹಾಸ : 21 ವಾಹನ​ ಧ್ವಂಸ

ಬೆಂಗಳೂರು: ಗೊಂಬೆ ಮಾಸ್ಕ್ ಧರಿಸಿ ಪುಂಡರು ಪುಂಡಾಟ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಲಗ್ಗೆರಿಯಲ್ಲಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ವಾಹನಗಳ ಗಾಜನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ಲಗ್ಗೆರೆ ರಾಜೀವ್ ಗಾಂಧಿನಗರ ಬಳಿ ಘಟನೆ ಜರುಗಿದೆ. ಡಿಯೋ ದ್ವಿಚಕ್ರ ವಾಹನದಲ್ಲಿ ಬಂದು ಲಾಂಗು ಮಚ್ಚಿನಿಂದ ಅಟ್ಯಾಕ್‌ ನಡೆದಿದೆ. 20 ಕ್ಕೂ ಹೆಚ್ಚು ವಾಹನಗಳಿಗೆ ಹಾನಿ ಮಾಡಿ ಪುಂಡರು ಪರಾರಿ ಆಗಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿಂದು ಸಿದ್ದರಾಮಯ್ಯ ಮತಬೇಟೆ

ಮದ್ಯ ರಾತ್ರಿ ಮೂವರು ಪುಂಡರಿಂದ ಕೃತ್ಯ ನಡೆದಿದೆ. ರಾಜಗೋಪಾಲ್‌ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆದಿದ್ದು, ರಾಜಗೋಪಾಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version