Site icon PowerTV

5 ದಿನ ಪಟಾಕಿ ಮಾರಾಟಕ್ಕೆ BBMP ಅವಕಾಶ : ಯಾವ್ಯಾವ ಪಟಾಕಿ ಮಾರಬಹುದು ಗೊತ್ತಾ?

ಬೆಂಗಳೂರು: ಇಂದಿನಿಂದ ಐದು ದಿನಗಳ‌ ಕಾಲ ಪಟಾಕಿ ಮಾರಾಟ ಮಾಡಲು BBMP ಅವಕಾಶ ನೀಡಿದೆ.

ಬೆಂಗಳೂರಿನ ಬಿಬಿಎಂಪಿಯ 62 ಮೈದಾನಗಳಲ್ಲಿ 267 ಪಟಾಕಿ ವ್ಯಾಪಾರಗಳಿಗೆ ಮಾರಾಟ ಮಾಡಲು ಅಷ್ಟೇ ಅವಕಾಶ ನೀಡಿದೆ. ಬಿಬಿಎಂಪಿ ಈ ಬಾರಿ ಪಟಾಕಿ ಮಳಿಗೆಗಳಿಗೆ ಅನುಮತಿ ನೀಡುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ನೀಡಿದೆ.

ಹೀಗಾಗಿ ಅನುಮತಿ ಇಲ್ಲದೆ ಪಟಾಕಿ ಮಾರಾಟ ಕಂಡು ಬಂದರೆ ಅಕ್ರಮ ಮಾರಾಟಗಾರರ ವಿರುದ್ಧ ಖಾಕಿ ಕಟ್ಟೆಚ್ಚರ ವಹಿಸಿದೆ. ನಗರದಾದ್ಯಂತ ಹಸಿರು ಪಟಾಕಿ‌ಗಷ್ಟೇ ಮಾರಾಟ ಮಾಡಲು ಅವಕಾಶ ನೀಡಿದೆ. ನಿಗದಿಗಿಂತ ಹೆಚ್ಚು ಪ್ರಮಾಣದ ಪಟಾಕಿ ದಾಸ್ತಾನು ಮಾಡುವಂತಿಲ್ಲ.

ಸಾಧ್ಯವಾದಷ್ಟೂ ಬೆಂಕಿ ತಡೆಯುವ ಉಪಕರಣಗಳನ್ನೇ ಬಳಸಿ ಮಳಿಗೆ ನಿರ್ಮಿಸಬೇಕು. ಮಳಿಗೆ ಮುಂಭಾಗ ಹಾಗೂ ಹಿಂಭಾಗ ಪ್ರವೇಶಿಸುವ ಅವಕಾಶ ಇರಬೇಕು. ಪ್ರತಿ ಮಾರಾಟ ಮಳಿಗೆಗೆ 3 ಮೀಟರ್ ಅಂತರ ಕಡ್ಡಾಯವಾಗಿರಬೇಕು.

ಇದನ್ನೂ ಓದಿ: ಹಸಿರು ಪಟಾಕಿಗೆ ಮಾತ್ರ ಅವಕಾಶ: ಪಟಾಕಿ ಸಿಡಿಸಲು ಇರುವ ಕಡ್ಡಾಯ ನಿಯಮಗಳೇನು? ಇಲ್ಲಿದೆ ಮಾಹಿತಿ

ಪರವಾನಗಿ ಪತ್ರ ಮಳಿಗೆಯಲ್ಲಿ ಪ್ರದರ್ಶಿಸಬೇಕು. ವಿದೇಶಿ ತಯಾರಿಕ ಪಟಾಕಿ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಪಟಾಕಿಯನ್ನು 18 ವರ್ಷದೊಳಗಿನ ಮಕ್ಕಳಿಗೆ ಮಾರಾಟ ಮಾಡುವಂತಿಲ್ಲ.

 

 

Exit mobile version