Site icon PowerTV

ದಕ್ಷಿಣ ಆಫ್ರಿಕಾಗೆ 245 ರನ್ ಟಾರ್ಗೆಟ್ ನೀಡಿದ ಅಫ್ಘಾನ್

ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ 245 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ಕಲೆಹಾಕಿದೆ.

ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್​ಗಳಲ್ಲಿ 244 ರನ್​ ಗಳಿಸಿ ಆಲೌಟ್​ ಆಯಿತು.

ಅಫ್ಘಾನಿಸ್ತಾನ ಪರ ಅಝ್ಮತುಲ್ಲಾ ಮಿರ್ಜಾ ಅಜೇಯ 97 ರನ್​ ಗಳಿಸಿದರು. ಕೇವಲ 3 ರನ್​ಗಳಿಂದ ಶತಕ ವಂಚಿತರಾದರು. ರಹಮತ್ ಶಾ 26, ನೂರ್ ಅಹಮದ್ 26, ಗುರ್ಬಾಜ್ 25 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯೆಟ್ಟಿ 4 ಪಡೆದು ಮಿಂಚಿದರೆ, ಕೇಶವ್ ಮಹಾರಾಜ್ 2 ಹಾಗೂ ಲುಂಗಿ 2 ವಿಕೆಟ್ ಪಡೆದರು.

ಅಫ್ಘಾನಿಸ್ತಾನ ತಂಡ

ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಅಜ್ಮತುಲ್ಲಾ ಉಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಇಕ್ರಮ್ ಅಲಿಖಿಲ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್

ದಕ್ಷಿಣ ಆಫ್ರಿಕಾ ತಂಡ

ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಆಂಡಿಲ್ ಫೆಹ್ಲುಕ್ವಾಯೊ, ಡೇವಿಡ್ ಮಿಲ್ಲರ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ

Exit mobile version