Site icon PowerTV

ಕಿಯೋನಿಕ್ಸ್​ನಲ್ಲಿ 500 ಕೋಟಿ ಅವ್ಯವಹಾರ ನಡೆದಿದೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಕಿಯೋನಿಕ್ಸ್​ನಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂದು ಬಿಜೆಪಿಯರು ಆರೋಪಿಸುತ್ತಿದ್ದಾರೆ. ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆ ಇದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಕಿಡಿಕಾರಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಯೋನಿಕ್ಸ್‌ನಲ್ಲಿ ಬಿಜೆಪಿ ಅವಧಿಯಲ್ಲಿ ಎಜಿ ರಿಪೋರ್ಟ್‌ನಂತೆ 500 ಕೋಟಿ ಅವ್ಯವಹಾರ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಪರ್ಸೆಂಟೇಜ್ ಇಲ್ಲದೆ ಕೆಲಸ ಆಗಲ್ಲ ಅಂತಿದ್ದಾರೆ. ಬಿಲ್ ಕೊಟ್ಟಿಲ್ಲ ಅಂತ ಬಿಜೆಪಿಯವರು ಹೇಳ್ತಾರೆ. ಎಷ್ಟು ಪೆಂಡಿಂಗ್ ಇದೆ ಅಂತ ಅವರಿಗೆ ಗೊತ್ತಿದ್ಯಾ? ಕೇವಲ 16 ಕೋಟಿ ಮಾತ್ರ ಪೆಂಡಿಂಗ್ ಇದೆ. ಮ್ಯಾನ್ಯುವಲ್ ಬಿಲ್ಲಿಂಗ್ ಆಗಿದೆ. ಅದನ್ನ ಚೆಕ್ ಮಾಡೋಕೆ ಪೆಂಡಿಂಗ್ ಇಡಲಾಗಿದೆ. ನಾನು ಪರಿಶೀಲಿಸದೇ ಹಾಗೇ ಹಣ ಕೊಡಬೇಕಾ? ಹಾಗಾದ್ರೆ ಜನರ ತೆರಿಗೆ ಹಣಕ್ಕೆ ಬೆಲೆಯೇ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನನ್ನ ರಾಜೀನಾಮೆ ಕೇಳ್ತಿದೆ

KEA ಪರೀಕ್ಷಾ ಅಕ್ರಮದ ಕಿಂಗ್​​ಪಿನ್ ಆರ್​​​.ಡಿ. ಪಾಟೀಲ್​​​​​​ಗೆ ನನ್ನ ಸಹಕಾರವಿದೆ ಎಂದು ಆರೋಪಿಸಿ ಬಿಜೆಪಿ ನನ್ನ ರಾಜೀನಾಮೆ ಕೇಳ್ತಿದೆ. ಆದರೆ, ಇವರು ಎಷ್ಟು ಅಕ್ರಮ ನಡೆಸಿದ್ದಾರೆ ಅಂತಾ ಗೊತ್ತಿದ್ಯಾ? ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ. ಮಾರ್ಕೆಟ್ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿಸಿದ್ದಾರೆ. 1 ಲಕ್ಷ ಇರೋದಕ್ಕೆ 5 ಲಕ್ಷ ಕೊಟ್ಟು ಖರೀದಿಸಿದ್ದಾರೆ. 2 ಸಾವಿರ ಬೆಲೆ ಬಾಳುವುದನ್ನ 60 ರೂ.ಗೆ ಮಾರಿದ್ದಾರೆ ಎಂದು ಅಂಕಿ ಅಂಶಗಳ ಸಮೇತ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

Exit mobile version