Site icon PowerTV

ಗೃಹಲಕ್ಷ್ಮೀ ಹೆಸರಲ್ಲಿ ಹೆಂಗಸರಿಗೆ ಟೋಪಿ : ನಳೀನ್​ ಕುಮಾರ್ ಕಟೀಲ್

ಬೆಂಗಳೂರು : ಗೃಹಲಕ್ಷ್ಮೀ ಹೆಸರಲ್ಲಿ ಸರ್ಕಾರ ರಾಜ್ಯದ ಹೆಂಗಸರಿಗೆ ಟೋಪಿ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿರುವ ಅವರು ಕಾಂಗ್ರೆಸ್ ಸರ್ಕಾರಕ್ಕೆ ಪಂಚರಾಜ್ಯಗಳ ಚುನಾವಣೆಗೆ ಹಣ ಕಳುಹಿಸುವುದೇ ದೊಡ್ಡ ಕೆಲಸವಾಗಿರುವಾಗ ರಾಜ್ಯದ ಗೃಹಲಕ್ಷ್ಮಿಯರ ಅಳಲು ಕೇಳಲು ಪುರುಸೊತ್ತಿಲ್ಲ.‘

‘ಗೃಹಲಕ್ಷ್ಮಿ’ ಎಂಬುದು ನೀರ ಮೇಲೆ ಬರೆದಷ್ಟೇ ಗ್ಯಾರಂಟಿ. ಸರ್ವರ್ ಸಮಸ್ಯೆ, ದಾಖಲೆ ಸರಿಯಿಲ್ಲ ಎಂಬುದು ಕೇವಲ ನೆಪವಷ್ಟೇ! ಗೃಹಲಕ್ಷಿ ಹೆಸರಲ್ಲಿ ರಾಜ್ಯದ ಹೆಂಗಸರಿಗೆ ಟೋಪಿ ಹಾಕುತ್ತಿದೆ ಎಂದು ಟೀಕಿಸಿದ್ದಾರೆ.

Exit mobile version