Site icon PowerTV

ದೀಪಾವಳಿಗೆ ಸ್ಥಳೀಯ ಉತ್ಪನ್ನ ಖರೀದಿಸಿ : ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ನವದೆಹಲಿ : ಈ ದೀಪಾವಳಿಯಲ್ಲಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ. ನಂತರ ಆ ಉತ್ಪನ್ನ ಅಥವಾ ಅದರ ತಯಾರಕರೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿ, ‘ನಮೋ ಆ್ಯಪ್‌’ನಲ್ಲಿ ಪೋಸ್ವ್‌ ಮಾಡಿ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ (ಟ್ವಿಟರ್‌) ಈ ಸಂದೇಶವನ್ನು ಪ್ರಧಾನಿ ‘ಈ ದೀಪಾವಳಿಯಲ್ಲಿ ನಮೋ ಅಪ್ಲಿಕೇಶನ್‌ನಲ್ಲಿ ‘ವೋಕಲ್‌ ಫಾರ್‌ ಲೋಕಲ್‌’ (Vocal For Local) ಥ್ರೆಡ್‌ಗಳೊಂದಿಗೆ ನಿಮ್ಮ ಸೆಲ್ಫಿಯನ್ನು ಪೋಸ್ಟ್‌ ಮಾಡಿ. ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವವನ್ನು ಹಬ್ಬದ ಸಂದರ್ಭದಲ್ಲಿ ಎತ್ತಿ ಹಿಡಿಯೋಣ’ ಎಂದು ಮೋದಿ ಹೇಳಿದ್ದಾರೆ.

‘ಈ ಅಭಿಯಾನ ಗಟ್ಟಿಗೊಳಿಸಲು, ಸಕಾರಾತ್ಮಕ ಮನೋಭಾವವನ್ನು ಹರಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ, ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸಲು ಡಿಜಿಟಲ್‌ ಮಾಧ್ಯಮದ ಶಕ್ತಿಯನ್ನು ಬಳಸೋಣ. ನಮ್ಮ ಜತೆಗಿನ ಭಾರತೀಯರ ಸೃಜನಶೀಲತೆಯನ್ನು ಪ್ರೋತ್ಸಾಹಿಸೋಣ ಮತ್ತು ನಮ್ಮ ಸಂಪ್ರದಾಯಗಳನ್ನು ಪ್ರವರ್ಧಮಾನಕ್ಕೆ ತರೋಣ’ ಎಂದು ಅವರು ಸಲಹೆ ನೀಡಿದ್ದಾರೆ.

‘ವೋಕಲ್‌ ಫಾರ್‌ ಲೋಕಲ್‌

ಅಕ್ಟೋಬರ್‌ನ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲೂ ಸ್ವದೇಶಿ ಉತ್ಪನ್ನಗಳನ್ನು ಮೋದಿ ಬೆಂಬಲಿಸಿದ್ದರು. ಸ್ಥಳೀಯರಿಗೆ ಧ್ವನಿಯಾಗಲು ಅವರು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬ ಹರಿದಿನಗಳಲ್ಲಿ ‘ವೋಕಲ್‌ ಫಾರ್‌ ಲೋಕಲ್‌’ ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದ್ದರು.

Exit mobile version