Site icon PowerTV

ಪವರ್ ಟಿವಿ ಬಿಗ್‌ ಇಂಪ್ಯಾಕ್ಟ್ : IMA ಸಂತ್ರಸ್ತರಿಗೆ 2ನೇ ಕಂತಿನ ಹಣ ರಿಲೀಸ್​​​​

ಬೆಂಗಳೂರು: ಐಎಂಎ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ಕಾಂಪಿಟೆಂಟ್ ಅಥಾರಿಟಿ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಮನ್ಸೂರ್ ಅಲಿಖಾನ್  ಒಡೆತನದ ಐಎಂಎ ಜುವೆಲ್ಲರಿಯಲ್ಲಿ ಡೈಮಂಡ್, ಗೋಲ್ಡ್, ಸಿಲ್ವರ್ ಜಪ್ತಿ ಮಾಡಿ ಇ-ಹರಾಜು ಮಾಡಲಾಗಿತ್ತು. ಸರ್ಕಾರ ಜಪ್ತಿ ಮಾಡಿ ಇ-ಹರಾಜು ಮಾಡುವ ಮೂಲಕ ಒಟ್ಟು 68 ಕೋಟಿ ರೂ. ಹಣ ಹಂಚಿಕೆ ಮಾಡಿದೆ.

ಈ ಬಗ್ಗೆ ಪವರ್ ಟಿವಿ ಸುದ್ದಿ ಪ್ರಸಾರ ಮಾಡಿದ್ದು, ಈ ಹಿನ್ನೆಲೆ IMA ಆಸ್ತಿ ಹರಾಜು ಹಾಕಿ ಸಂತ್ರಸ್ತರಿಗೆ ಹಣ ಹಂಚಿಕೆ ಮಾಡಲಾಗಿದೆ. ಅಂದ್ರೆ ಇದೀಗ IMA ಸಂತ್ರಸ್ತರಿಗೆ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.

ಮೊದಲ ಕಂತಿನಲ್ಲಿ 19 ಕೋಟಿ ರೂ ಬಿಡುಗಡೆಯಾಗಿತ್ತು. ಇದೀಗ ಎರಡನೇ‌ ಕಂತಿನ ಹಣ ಬಿಡುಗಡೆಯಾಗಿದೆ.
ಒಟ್ಟು 69 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.

ಒಟ್ಟು 51 ಸಾವಿರ ಜನ ಸಂತ್ರಸ್ತರಿಗೆ ಹಣ ಬಿಡುಗಡೆ ಆಗಿದೆ. ಈಗಾಗಲೇ 10 ಸಾವಿರ ಜನರ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಜನರಿಗೆ ಮೂರು ನಾಲ್ಕು ದಿನದಲ್ಲಿ ಹಣ ಸಂದಾಯವಾಗಲಿದೆ. ಹಣ ಕಳೆದುಕೊಂಡ ಗ್ರಾಹಕರ ಖಾತೆಗೆ ಮಾತ್ರ ಹಂತ-ಹಂತವಾಗಿ ಹಣ ಜಮೆ ಮಾಡುತ್ತಿದೆ. ಹಣ ಕಳೆದುಕೊಂಡ ಗ್ರಾಹಕರ ಮೊಗದಲ್ಲಿ ಇದೀಗ ಸಂತಸ ಮೂಡಿದೆ.

Exit mobile version