Site icon PowerTV

ಕಾಂಗ್ರೆಸ್​ನವರು ಲೂಟಿಕೋರರು, ಬಡವರ ದುಡ್ಡು ಹೊಡೀತಿದ್ದಾರೆ : ಕೆ.ಎಸ್ ಈಶ್ವರಪ್ಪ

ಬೆಂಗಳೂರು : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನುದಾನ ಕೊಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​​​​​​​​​​​​​ನವರು ಯಾರಿಗೆ ಹಣ ಕೊಟ್ಟಿದ್ದಾರೆ ಹೇಳಲಿ. ಕಟ್ಟಡ ಕಾರ್ಮಿಕರು ಮಾತ್ರವಲ್ಲ. ಎಸ್ಸಿ, ಎಸ್ಟಿ ಮಕ್ಕಳಿಗೂ ಅನ್ಯಾಯ ಮಾಡಿದ್ದಾರೆ. ಟೆಂಡರ್ ಶುರುಮಾಡಬೇಕಾದ ಕಾರ್ಯವನ್ನೂ ನಿಲ್ಲಿಸಿ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಡವರು, ಕಟ್ಟಡ ಕಾರ್ಮಿಕರ ದುಡ್ಡು ಹೊಡೀತಿದ್ದಾರೆ. ಕಾಂಗ್ರೆಸ್​​​​ನವರು ಲೂಟಿಕೋರರು. ನಾವು ಲೂಟಿ ಹೊಡೆಯೋದು ಮುಂದುವರಿಸುತ್ತೇವೆ ಅಂತ ಹೊರಟಿದ್ದಾರೆ. ಇದು ನಾಚಿಕೆಗೇಡಿನ ಸರ್ಕಾರ. ನನ್ನ ಜೀವನದಲ್ಲಿ ಇಷ್ಟು ಕರೆಪ್ಟ್ (ಭ್ರಷ್ಟ) ಸರ್ಕಾರ ನೋಡಿಲ್ಲ. ಇವರು ಲೂಟಿಕೋರರು ಅಂತ ನೇರವಾಗಿ ಆರೋಪ ಮಾಡ್ತೀನಿ. ಅದಕ್ಕೆ ನಾನು ಹೇಳಿದ್ದೇನೆ, ಒಬ್ಬ ಜಡ್ಜ್, ರಿಟೈರ್ಡ್ ಜಡ್ಜ್ ನೇಮಕ ಮಾಡಲಿ. ಯಾರ್ಯಾರು ಎಷ್ಟು ಲೂಟಿ ಹೊಡೆದಿದ್ದಾರೆ. ಅವರ ಬಳಿ ಕರೆದುಕೊಂಡು ಹೋಗಿ ನಿಲ್ಲಿಸ್ತೇನೆ ಎಂದು ಕೆ.ಎಸ್ ಈಶ್ವರಪ್ಪ ಸವಾಲ್ ಹಾಕಿದ್ದಾರೆ.

ನಾವು ನೂರು ವಿಚಾರ ಹೇಳ್ತಿದ್ದೇವೆ

ಕಾಂಗ್ರೆಸ್​ನವರು ಎರಡು ಪ್ರಶ್ನೆ ಮಾತ್ರ ಕೇಳ್ತಾರೆ. ಒಂದು ಬಿಜೆಪಿಯವರು ವಿಪಕ್ಷ ನಾಯಕರನ್ನು ಆಯ್ಕೆ ಮಾಡಿಲ್ಲ ಅಂತ. ಮತ್ತೊಂದು ಪ್ರಧಾನಿ ನರೇಂದ್ರ ಮೋದಿ ಅಂತ. ಎರಡೇ ವಿಚಾರ, ನಾವು ನೂರು ವಿಚಾರ ಹೇಳ್ತಿದ್ದೇವೆ ಎಂದು ಕುಟುಕಿದ್ದಾರೆ.

Exit mobile version