Site icon PowerTV

ಪ್ರಿಯಾಂಕ್ ಖರ್ಗೆ ಭ್ರಷ್ಟಾಚಾರದ ಕೇಂದ್ರ ಬಿಂದು : ಎಂ.ಜಿ ಮಹೇಶ್

ಬೆಂಗಳೂರು : ಕಾಂಗ್ರೆಸ್​ ಸರ್ಕಾರ ತನ್ನೆಲ್ಲಾ ಕರ್ತವ್ಯವನ್ನ ಲೂಟಿ ಮಾಡಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ ಮಹೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ‌ ಅವರು ಭ್ರಷ್ಟಾಚಾರದ ಕೇಂದ್ರ ಬಿಂದುವಾಗಿದ್ದಾರೆ. ಕಿಂಗ್​​ಪಿನ್​​ ಆರೋಪಿ ಆರ್.ಡಿ ಪಾಟೀಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಲು ಹೊರಟಿದ್ರು. ಸರ್ಕಾರ ಈಗ ಅವರನ್ನ ಪೋಶಿಸುವ ಕೆಲಸ ಮಾಡ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದೆಲ್ಲಾ ಬಂದು ತಲುಪೋದು ಸಚಿವ ಪ್ರಿಯಾಂಕ್ ಖರ್ಗೆಗೆ. ಆರ್.ಡಿ ಪಾಟೀಲ್ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಸಹಾಯ ಮಾಡ್ತಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಇದಕ್ಕೆ ಉತ್ತರ ಕೊಡಬೇಕು. ಅದು ಬಿಟ್ಟು, ಪ್ರಿಯಾಂಕ್ ಖರ್ಗೆ ಉತ್ತರ ಕೊಡ್ತಿದ್ದಾರೆ. ಸಿಬಿಐ ತನಿಖೆ ಬೇಡ ಅಂತ ಪ್ರಿಯಾಂಕ್ ಖರ್ಗೆ ಹೇಳ್ತಿದ್ದಾರೆ. ಅದನ್ನ ಹೇಳಲು ನೀವ್ಯಾರು? ಎಂದು ಎಂ.ಜಿ ಮಹೇಶ್ ಕಿಡಿಕಾರಿದ್ದಾರೆ.

Exit mobile version