Site icon PowerTV

ಪರೀಕ್ಷೆ ಅಕ್ರಮದಲ್ಲಿ ಕಿಂಗ್​ಪಿನ್ ಕಾಂಗ್ರೆಸ್ : ಶಾಸಕ ಯತ್ನಾಳ್ 

ಚಾಮರಾಜನಗರ: ಅಕ್ರಮದ ಕಿಂಗ್‌ಪಿನ್‌ಗಳೆಲ್ಲರೂ ಕಾಂಗ್ರೆಸ್‌ನವರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಹೇಳಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು ನಿಮಗೆ ಧಮ್‌, ತಾಕತ್‌ ಇದ್ರೆ ಅಕ್ರಮದ ಕಿಂಗ್​ಪಿನ್​ಗಳ ತನಿಖೆ ಮಾಡಿಸಿ ಈಗ ನಿಮ್ಮದೇ ಸರ್ಕಾರ ಇದೆ ಸಿಬಿಐ ತನಿಖೆ ಮಾಡಿ. ನೀವು ಐದು ತಿಂಗಳಾದರೂ ಯಾವ ತನಿಖೆ ಮಾಡಿಲ್ಲ. ನಿಮಗೆ ಧಮ್, ತಾಖತ್ ಇದ್ರೆ ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಕೆಇಎ ಪರೀಕ್ಷೆ ಅಕ್ರಮ: ಕಾಂಪೌಂಡ್ ಹಾರಿ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಪರಾರಿ

ಅಕ್ರಮದ ಕಿಂಗ್‌ಪಿನ್‌ಗಳೆಲ್ಲರೂ ಕಾಂಗ್ರೆಸ್‌ನವರು ಪಿಎಸ್ಐ ಹಗರಣ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ದ ಮಾತನಾಡುತ್ತಿದ್ದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೇನೋ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಈಗ ಪ್ರಿಯಾಂಕ್ ಖರ್ಗೆ ಎಲ್ಲಿಗೆ ಹೋದರು.

ಕಾಂಗ್ರೆಸ್ ಪಕ್ಷದವರೇ ಅಕ್ರಮದ ಕಿಂಗ್‌ಪಿನ್‌ ಆಗಿದ್ದಾರೆ. ಇದೆಲ್ಲಾ ನೋಡಿದರೆ ಪಿಎಸ್ಐ ಹಾಗೂ ಕೆಎಇ ಪರೀಕ್ಷಾ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎನಿಸುತ್ತದೆ ಎಂದು ಯತ್ನಾಳ್‌ ಶಂಕೆ ವ್ಯಕ್ತಪಡಿಸಿದರು.

Exit mobile version