Site icon PowerTV

ಪುತ್ತೂರಿನ ಪ್ರತ್ಯೇಕ ಹುಲಿವೇಷ ಕಲಾವಿದ ಅಕ್ಷಯ್ ಕಲ್ಲೇಗ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ಪ್ರಸಿದ್ಧ ನವರಾತ್ರಿ ಹುಲಿವೇಷ ತಂಡವಾದ ಕಲ್ಲೇಗ ಟೈಗಸ್೯ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಎಂಬ ಯುವಕನನ್ನು ಪುತ್ತೂರು ಹೊರ ವಲಯದ ನೆಹರೂ ನಗರದಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.

ನೆಹರೂ ನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಸೋಮವಾರ ಮಧ್ಯರಾತ್ರಿ ಅಕ್ಷಯ್ ಮೇಲೆ ತಂಡವೊಂದು ದಾಳಿ ಮಾಡಿದೆ. ಮಾತುಕತೆಗೆ ಬರಲು ಹೇಳಿ ದಾಳಿ ಮಾಡಲಾಗಿದೆ ಎಂಬ ಅಂಶ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಕಾಲೇಜು ರಸ್ತೆಯಲ್ಲಿ ದಾಳಿ ಮಾಡುತ್ತಿದ್ದಂತೆ ಅಕ್ಷಯ್ ಅಲ್ಲಿಂದ ಓಡಿದ್ದು, ದುಷ್ಕರ್ಮಿಗಳ ತಂಡ ಬೆನ್ನಟ್ಟಿಕೊಂಡು ಹೋಗಿದೆ.

ಮಾಣಿ ಹಾಗೂ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಈ ಘಟನೆ ನಡೆದಿದೆ. ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಮಾರಕ ದಾಳಿಗೆ ತುತ್ತಾದ ಅಕ್ಷಯ್ ಹೆದ್ದಾರಿಯ ಇನ್ನೊಂದು ಭಾಗದ ಖಾಲಿ ಜಾಗದ ಪೊದೆಯ ಪಕ್ಕದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಕೆಇಎ ಪರೀಕ್ಷೆ ಅಕ್ರಮ: ಕಾಂಪೌಂಡ್ ಹಾರಿ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಪರಾರಿ

ಘಟನೆಯ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ತಡರಾತ್ರಿ ಅಕ್ಷಯ್ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ.

 

Exit mobile version