Site icon PowerTV

ನಾವು ಆಪರೇಷನ್ ಕಮಲ ಮಾಡಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕಾಂಗ್ರೆಸ್​​ನವರು ನಮ್ಮ ಶಾಸಕರನ್ನು ಸೆಳೆಯಲು ಯತ್ನ ಮಾಡುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್​​.ಡಿ. ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಪರೇಷನ್ ಕಮಲ ಮಾಡಲ್ಲ. ಯಾರು ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರ್ತಾರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ತಿವಿ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇಂದು ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯಕ್ಕೆ ಕೊಡಬೇಕಾದನ್ನೇ ಇನ್ನ ಅವರು ಕೊಟ್ಟಿಲ್ಲ. ಅವರು ರಾಜಕೀಯ ಭಾಷಣ ಮಾಡಿದ್ದಾರೆ. ದಾಖಲಾತಿಗಳನ್ನು ಇಟ್ಟು ಮಾತನಾಡಲಿ ಬೇಕಾದ್ರೆ, ಸುಳ್ಳು ಹೇಳಬಾರದು ಎಂದು ಚಾಟಿ ಬೀಸಿದ್ದಾರೆ.

ಮೋದಿಗೆ ಇದು ಶೋಭೆ ತರಲ್ಲ

ಬರಗಾಲದ ಹಣ (ಪರಿಹಾರ) ಇನ್ನೂ ಕೊಡೋಕೆ ಆಗಿಲ್ಲ ಅವರಿಂದ. 5 ಉಚಿತ ಗ್ಯಾರಂಟಿ ಕೊಡೋಕೆ ಆಗಲ್ಲ ಅಂದಿದ್ದರು. ರಾಜ್ಯ ದಿವಾಳಿ ಆಗುತ್ತೆ ಅಂದಿದ್ದರು. ಈಗ ನಾವು ಮಾಡಿಲ್ವಾ? ಈ ರೀತಿಯ ಹೇಳಿಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಶೋಭೆ ತರಲ್ಲ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

Exit mobile version