Site icon PowerTV

ಪ್ರತಿಮಾ ಕೊಲೆ ಪ್ರಕರಣ: ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ

ಬೆಂಗಳೂರು: ಹಿರಿಯ ಗಣಿ ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಅವರ ಚಾಲಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಕಾಂಟ್ರಾಕ್ಟ್ ಬೇಸಿಸ್ ನಲ್ಲಿ ಕಿರಣ್ ಕೆಲಸ ಮಾಡುತ್ತಿದ್ದ. ಕೆಲಸ ಮಾಡ್ತಿದ್ದ ಕಿರಣ್‍ಗೆ ಕೆಲವೊಂದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಮಾ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಕಿರಣ್‍ನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.

ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಕಿರಣ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕಿರಣ್ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಚಾಲಕರಾದ್ದರು. ಸದ್ಯ ಕೃತ್ಯ ನಡೆದ ಬಳಿಕ ಕಿರಣ್ ಚಾಮರಾಜನಗರ ಕಡೆಗೆ ಎಸ್ಕೇಪ್ ಆಗಿದ್ದ. ಈ ವೇಳೆ ಚಾಮರಾಜನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತ ಪ್ರತಿಮಾ ಮೊಬೈಲ್ ವಶಕ್ಕೆ ಪಡೆದಿರುವ ಸುಬ್ರಹ್ಮಣ್ಯಪುರ ಪೊಲೀಸರು ಪರಿಶೀಲನೆಗೆ ನಡೆಸುತ್ತಿದ್ದಾರೆ. ಕೊಲೆಯಾದ ವೇಳೆ ಮನೆಯ ಬಾಗಿಲು ಬಳಿ ಪ್ರತಿಮಾ ಮೊಬೈಲ್ ಫೋನ್ ಪತ್ತೆಯಾಗಿತ್ತು. ಆದರೆ ಫೋನ್ ಲಾಕ್ ಹಿನ್ನೆಲೆಯಲ್ಲಿ ಟೆಕ್ನಿಕಲ್ ಸೆಲ್ ಗೆ ರವಾನಿಸಿ ಲಾಕ್ ತೆಗೆದು ಪರಿಶೀಲಿಸುತ್ತಿದ್ದಾರೆ.

 

 

Exit mobile version