Site icon PowerTV

ರಾಜ್ಯದಲ್ಲಿ12884ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಗುತ್ತಲೇ ಇದೆ.ಈಗಾಗಲೇ ರಾಜ್ಯದಲ್ಲಿ 13 ಸಾವಿರದತ್ತ ಮುನ್ನುಗುತ್ತಿರುವ ಡೆಂಗ್ಯೂ ಪ್ರಕರಣ ಕಂಡುಬಂದಿವೆ.

ಬೆಂಗಳೂರಿನಲ್ಲಿ ಡೆಂಗಿ ಜ್ವರ ರಣಕೇಕೆ ಹಾಕಿ ಶುರುವಾಗಿದ್ದು,ಬಿಬಿಎಂಪಿ ವ್ಯಾಪ್ತಿಯಲ್ಲೇ 6714 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ಹೊರತು ಪಡಿಸಿ ರಾಜ್ಯದಲ್ಲಿ 6170 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಈವರೆಗೂ ರಾಜ್ಯದಲ್ಲಿ ಡೆಂಗ್ಯೂಗೆ 9 ಜನ ಬಲಿಯಾಗಿದ್ದಾರೆ.  ಇದರ ಜೊತೆ ಚಿಕನ್‌ಗುನ್ಯಾ ಕೇಸ್‌ಗಳು ಉಲ್ಬಣವಾಗಿದೆ. ರಾಜ್ಯದಲ್ಲಿ ಈವರೆಗೆ 1300ಕ್ಕೂ ಹೆಚ್ಚು ಜನರಲ್ಲಿ ಚಿಕನ್ ಗುನ್ಯಾ ಕೇಸ್ ಪತ್ತೆಯಾಗಿವೆ.

ಕಳೆದೊಂದು ತಿಂಗಳಲ್ಲಿ ಆರೋಗ್ಯರ ನೇತೃತ್ವದಲ್ಲಿ ಹಲವಾರು ಸಭೆ ನಡೆಸಿದ್ರೂ ಏನೂ ಪ್ರಯೋಜವಿಲ್ಲದಂತಾಗಿದೆ. ಇನ್ನು ಮುಂದೆ ಆದ್ರೂ ಅರೋಗ್ಯ ಇಲಾಖೆ ಎಚ್ಚರಿಕೆಯಿಂದ ಡೆಂಗಿ ನಿಯಂತ್ರಣ ಮಾಡಬೇಕು.

Exit mobile version