Site icon PowerTV

ಸದ್ಯಕ್ಕೆ ಬಸ್​ ಟಿಕೆಟ್ ದರ ಏರಿಕೆ ಮಾಡೋಲ್ಲ : ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಸದ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ  ಸರ್ಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕೆ.ಎಸ್.ಆರ್.ಟಿ.ಸಿ  ಬಸ್ ಪ್ರಯಾಣದ ದರ ಏರಿಕೆ ಮಾಡುವ ಪ್ರಸ್ತಾವನೆ ಸದ್ಯಕ್ಕಂತೂ ಇಲ್ಲ ಎಂದರು.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಬಸ್ ಟಿಕೆಟ್ ದರ ಹೆಚ್ಚಳ: ಜನರ ಜೇಬಿಗೆ ಕತ್ತರಿ

ಟಿಕೆಟ್ ದರ ಏರಿಕೆ ಸಂಬಂಧಿಸಿ ತಿರ್ಮಾನಿಸಲು ನಿಯಂತ್ರಣ ಸಮಿತಿ ರಚಿಸುವಂತೆ ರಾಜ್ಯದ ಎಲ್ಲಾ ಬಸ್ ಸಾರಿಗೆ ನಿಗಮಗಳ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಇನ್ನೂ ಸಮಿತಿ ರಚಿಸಲಾಗಿಲ್ಲ. ನಾವು ಟಿಕೆಟ್ ದರವನ್ನು ಪರಿಷ್ಕರಿಸಿ ಲ್ಲ. ನಿಯಂತ್ರಣ ಸಮಿತಿ ಸ್ಥಾಪಿಸಿದ ನಂತರ ಈ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವು ತಕ್ಷಣವೇ ಟಿಕೆಟ್ ದರವನ್ನು ಹೆಚ್ಚಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

 

Exit mobile version