Site icon PowerTV

ಪ್ರತಿಮಾ ಕೊಲೆ ಪ್ರಕರಣ : ಮಾಜಿ ಕಾರು ಚಾಲಕನಿಂದಲೇ ಗಣಿ ಅಧಿಕಾರಿ ಕೊಲೆ

ಬೆಂಗಳೂರು: ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತರಾದ ದಯಾನಂದ್ ಅವರು, “ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಆತನನ್ನು ಮಲೆಮಹದೇಶ್ವರ ದೇವಸ್ಥಾನದಲ್ಲಿ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.

ಮೊಬೈಲ್​ ಲೊಕೇಶನ್​​​ ಆಧರಿಸಿ ಕಿರಣ್‌ ಅರೆಸ್ಟ್ ಮಾಡಿದಾಗ ಪ್ರಾಥಮಿಕ ತನಿಖೆಯಲ್ಲಿ ಪ್ರಾಥಮಿಕ ತನಿಖೆಯಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ.

ಕಾಂಟ್ರ್ಯಾಕ್ಟ್‌ ಆಧಾರದ ಮೇಲೆ ಕೆಲಸ ಮಾಡ್ತಿದ್ದ ಕಿರಣ್​ನ್ನು ಅಪಘಾತ ಸಂಬಂಧ ಕೆಲಸದಿಂದ ತೆಗೆದು ಹಾಕಿದ್ದರು. ಕೊಲೆಗೂ ಮುನ್ನ ಪ್ರತಿಮಾ ಕಾಲಿಗೆ ಬಿದ್ದಿದ್ದು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು ಇದಕ್ಕೆ ನಿರಾಕರಿಸಿದಕ್ಕೆ ಪ್ರತಿಮಾ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.

 

 

Exit mobile version