Site icon PowerTV

ಆ ಸ್ವಾಮೀಜಿ ನಕ್ಸಲೈಟ್ ಆಗಬೇಕಿತ್ತು, ಪಾಪ ಖಾವಿ ಹಾಕಿದ್ದಾರೆ : ಶಾಸಕ ಯತ್ನಾಳ್

ಚಾಮರಾಜನಗರ : ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂಬ ಸಾಣೇಹಳ್ಳಿ ಸ್ವಾಮೀಜಿಗಳ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆ ಬರ ಪ್ರವಾಸದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ಆಧಾರದ ಮೇಲೆ ನಾವು ವೀರಶೈವ ಲಿಂಗಾಯತರಾಗಿದ್ದೇವೆ. ಪಾಪ ಆ ಸ್ವಾಮೀಜಿ ನಕ್ಸಲೈಟ್ ಆಗಬೇಕಿತ್ತು, ಕಮ್ಯೂನಿಸ್ಟ್ ಆಗಿದ್ದಾರೆ. ದುರ್ದೈವ ಅವರು ಖಾವಿ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಕೆಲವು ಸ್ವಾಮೀಜಿಗಳು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಮುಂದಿನ ವರ್ಷವಾದರೂ ಪ್ರಶಸ್ತಿ ನೀಡಲಿ ಅನ್ನೋದು ಅವರ ಉದ್ದೇಶವಾಗಿದೆ. ಈಗಾಗಲೇ ಒಬ್ಬ ಸ್ವಾಮೀಜಿಗೆ ಕೊಟ್ಟಿದ್ದಾರೆ. ಪ್ರಶಸ್ತಿ, ಜೀವನ ವೆಚ್ಚ ಎಲ್ಲವನ್ನೂ ಕೊಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಭಗವಾಧ್ವಜ ಹಾಕಿಕೊಂಡ ಕಳ್ಳರಿದ್ದಾರೆ

ಹಿಂದೂ ವಿರೋಧಿ ಹೇಳಿಕೆ ಕೊಟ್ಟರೆ ಮಠಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಕೊಡುತ್ತಾರೆ ಅನ್ನೋದು ಅವರ ನಂಬಿಕೆ. ಹೀಗಾಗಿ, ಹಿಂದೂ ಧರ್ಮ, ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಹಿಂದೂ ಧರ್ಮದ ವಿರುದ್ಧ ಮಾತನಾಡಲೂ ಪೇಯ್ಡ್ ಸಾಹಿತಿಗಳಿದ್ದರೆ, ಪೇಯ್ಡ್ ಭಗವಾಧ್ವಜ ಹಾಕಿಕೊಂಡ ಕಳ್ಳರಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Exit mobile version