Site icon PowerTV

ಚಾಕುವಿನಿಂದ ಇರಿದು ಗಣಿ ಇಲಾಖೆ ಉಪ ನಿರ್ದೇಶಕಿಯ ಬರ್ಬರ ಹತ್ಯೆಗೆ ಕಾರಣವೇನು..?

ಬೆಂಗಳೂರು: ದೊಡ್ಡಕಲ್ಲಸಂದ್ರದ ಮನೆಯಲ್ಲಿ ಇಂದು ಬರ್ಬರ ಕೃತ್ಯವೊಂದು ನಡೆದಿದೆ.

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುವ ದೊಡ್ಡಕಲ್ಲಸಂದ್ರದ ಮನೆನಲ್ಲಿ ಇಂತಹ ದುರ್ಘಟನೆ ಸಂಭವಿದಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯ ಪ್ರತಿಮಾ (45) ಕೊಲೆಯಾಗಿದ್ದಾರೆ.

ಏನಿದು ಘಟನೆ..? 

ಶನಿವಾರ (ನ.4) ರಂದು ರಾತ್ರಿ 8.30ರ ಸುಮಾರಿಗೆ ಹತ್ಯೆ ನಡೆದಿದ್ದು, ಪ್ರತಿಮಾಳಿಗೆ ಶನಿವಾರ ರಾತ್ರಿ ಅವರ ಸಹೋದರ ಕರೆ ಮಾಡಿದ್ದಾರೆ. ಆದರೆ ಸ್ವೀಕರಿಸದೆ ಇದ್ದಾಗ ಅನುಮಾನಗೊಂಡು ಭಾನುವಾರ ಬೆಳಗ್ಗೆ ಮನೆ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.ಇನ್ನೂ ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಕೊಲೆಯನ್ನು ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಮೊಬೈಲ್​ ರಾಬರಿ ಕೇಸ್​: ಇಬ್ಬರು ಆರೋಪಿಗಳು ಅರೆಸ್ಟ್​!

ಕಳೆದ ಎಂಟು ವರ್ಷಗಳಿಂದ ದೊಡ್ಡಕಲ್ಲಸಂದ್ರದಲ್ಲಿ ಪ್ರತಿಮಾ ವಾಸವಾಗಿದ್ದರು. ಪ್ರತಿಮಾ ಅವರ ಪತಿ ಸತ್ಯನಾರಯಣ, ಮಗ ತೀರ್ಥಹಳ್ಳಿಯಲ್ಲಿ ವಾಸವಾಗಿದ್ದರು. ದೊಡ್ಡಕಲ್ಲಸಂದ್ರದಲ್ಲಿ ಈಕೆ ಒಬ್ಬರೇ ವಾಸ ಮಾಡುತ್ತಿದ್ದರು.

ಶನಿವಾರ ರಾತ್ರಿ 8 ಗಂಟೆಗೆ ಕಚೇರಿ ಕೆಲಸವನ್ನು ಮುಗಿಸಿ ಪ್ರತಿಮಾರನ್ನು ಚಾಲಕ ಸರ್ಕಾರಿ ಕಾರಿನಲ್ಲೇ ಮನೆಗೆ ಬಿಟ್ಟು ತೆರಳಿದ್ದ ಎನ್ನಲಾಗಿದೆ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಪ್ರತಿಮಾ ಹತ್ಯೆಯಾಗಿದ್ದಾರೆ.

 

 

 

 

 

Exit mobile version