Site icon PowerTV

ಡಿಕೆಶಿ ಸಿಎಂ ಆದ್ರೆ ಜೆಡಿಎಸ್ ಬೆಂಬಲ : H.D ಕುಮಾರಸ್ವಾಮಿ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್​ ಟಾಂಗ್

ಬೆಂಗಳೂರು:  ಸಿಎಂ ವಿಚಾರವಾಗಿ ರಾಜ್ಯದಲ್ಲಿ ಹೇಳಿಕೆಗಳ ಸುರಿಮಳೆ ದಿನಕ್ಕೊಂದು ಸಂಚಲನ ಸೃಷ್ಟಿಸುತ್ತಲಿದೆ ಹೊರತು ಕಡಿಮೆಯಾಗಿಲ್ಲ. ಇದರ ನಡುವೆ ನಿನ್ನೆ ಹೆಚ್.ಡಿ.ಕುಮಾರಸ್ವಾಮಿಯವರು ಸುದ್ದಿಗೋಷ್ಠಿಯಲ್ಲಿ ಡಿ.ಕೆ ಶಿಮಕುಮಾರ್​ಗೆ ಬಿಗ್ ಆಫರ್​ ನೀಡಿದ್ದರು.

ಡಿ.ಕೆ ಶಿವಕುಮಾರ್ ನಾಳೆ ಸಿಎಂ ಆದರೆ ನಮ್ಮ ಜೆಡಿಎಸ್​ ಪಕ್ಷದ 19ಶಾಸಕರ ಬೆಂಬಲವನ್ನು ಕೊಂಡುತ್ತೇವೆ. ಎಂಬ ಹೇಳಿಕೆಗೆ ಇದೀಗ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​ ಹೆಚ್​.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: ಇಂದು ಭಾರತ-ದಕ್ಷಿಣ ಆಫ್ರಿಕಾ ಮುಖಮುಖಿ!

ಕುಮಾರಸ್ವಾಮಿಯವರು ಸುಮ್ಮನೇ ನಾಟಕೀಯ ಹೇಳಿಕೆ ನೀಡುತ್ತಿದ್ದಾರೆ. ನಮ್ಮಲ್ಲಿ ಗೊಂದಲ ಸೃಷ್ಟಿ ಮಾಡಲು ಹೆ​ಚ್​​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಯಾರೂ ಗೊಂದಲ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ವಿಪಕ್ಷ ನಾಯಕರಾಗುವುದಕ್ಕೆ ಬಿಜೆಪಿಯವರೆಲ್ಲಾ ಅಸಮರ್ಥರೇ..? ಇವರಿಗೆ ವಿರೋಧ ಪಕ್ಷದ ನಾಯಕನಾಗಲು ಸಮರ್ಥರು ಇಲ್ಲವೇ..? ಈಗ ಹೆಚ್. ಡಿ ಕುಮಾರಸ್ವಾಮಿನ್ನ ವಿರೋಧ ಪಕ್ಷದ ನಾಯಮಕ ಎಂದು ಬಿಂಬಿಸಿದ್ದಾರೆ  ಎಂದು ಹೇಳಿದ್ದರು.

 

Exit mobile version