Site icon PowerTV

ಸಿಎಂ ವಿಚಾರದಲ್ಲಿ ಇನ್ಮುಂದೆ ಯಾರು ಹೇಳಿಕೆ ನೀಡಲ್ಲ : ಸಿದ್ದರಾಮಯ್ಯ

ಮೈಸೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಪೂರ್ಣಾವಧಿ ಸಿಎಂ ವಿಚಾರದಲ್ಲಿ ಇನ್ಮುಂದೆ ಯಾರು ಹೇಳಿಕೆ ನೀಡಬೇಡಿ‌ ಅಂತಾ ನಮ್ಮ ಶಾಸಕರು ಮತ್ತು ಸಚಿವರಿಗೆ ಹೇಳಿದ್ದೇನೆ ಎಂದು ‌ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿನ್ನೆ ಉಪಹಾರ ಸಭೆಯಲ್ಲಿ ಈ ಬಗ್ಗೆ ನಾನೇ ಪ್ರಸ್ತಾಪ ಮಾಡಿದ್ದೇನೆ. ಇನ್ಮುಂದೆ ಯಾರು ಮಾತನಾಡಬೇಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ಮುಂದಿನ ಚುನಾವಣೆಗೆ ಬಗ್ಗೆಯೂ ಕೆಲವು ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.‌

ಡಿ.ಕೆ. ಶಿವಕುಮಾರ್ ಸಿಎಂ ಆಗುವುದಾದರೇ ಜೆಡಿಎಸ್ ಶಾಸಕರ ಬೆಂಬಲ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿದು ವ್ಯಂಗ್ಯದ ಹೇಳಿಕೆ. ವ್ಯಂಗ್ಯ ಬಿಟ್ಟರೇ ಅದರಲ್ಲಿ ಬೇರೆ ಏನೂ ಇಲ್ಲ. ಖುದ್ದು ಡಿ.ಕೆ ಶಿವಕುಮಾರ್ ಅವರೇ ಅದನ್ನ ವ್ಯಂಗ್ಯ ಎಂದು ಹೇಳಿದ್ದಾರೆ. ಆ ಹೇಳಿಕೆಯಲ್ಲಿ ವ್ಯಂಗ್ಯ ಬಿಟ್ಟರೆ ಬೇರೆ ಏನೂ ಇಲ್ಲ ಎಂದು ಕುಟುಕಿದರು.

ಬಿಜೆಪಿ ಮತ್ತು ಜೆಡಿಎಸ್ ಇಬ್ಬರು ರಾಜಕೀಯವಾಗಿ ಹತಾಶರಾಗಿದ್ದಾರೆ. ಈ ಹತಾಶೆಯಲ್ಲೇ ಸಿಎಂ ಖುರ್ಚಿಯ ಬಗ್ಗೆ ಇಲ್ಲಸಲ್ಲದನ್ನ ಮಾತನಾಡುತ್ತಿದ್ದಾರೆ‌ ಎಂದು ಸಿದ್ದರಾಮಯ್ಯ ಹೇಳಿದರು.

Exit mobile version