Site icon PowerTV

50ಕ್ಕೂ ಹೆಚ್ಚು ಬಾಲಕಿಯರ ಮೇಲೆ ಪ್ರಿನ್ಸಿಪಾಲ್ ಲೈಂಗಿಕ ದೌರ್ಜನ್ಯ

ಹರಿಯಾಣ : ಶಿಕ್ಷಕ ಎಂದರೆ ದೇವರಿಗೆ ಸಮ. ಮಕ್ಕಳು ಪೋಷಕರ ಮಡಿಲಲ್ಲಿ ಇದಷ್ಟೇ ಸುರಕ್ಷಿತವಾಗಿ ಗುರುಗಳ ಬಳಿಯೂ ಇರುತ್ತಾರೆ ಎಂದು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ.

ಆದರೆ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಬೇಕಿದ್ದ ಗುರುವೇ ಇಲ್ಲಿ ಕಾಮುಕನಾಗಿದ್ದಾನೆ. ಹರಿಯಾಣದ ಜಿಂದ್‌ನ ಶಾಲೆಯೊಂದರಲ್ಲಿ 55 ವರ್ಷದ ಪ್ರಾಂಶುಪಾಲ 50ಕ್ಕೂ ಹೆಚ್ಚು ಬಾಲಕಿಯರ ಮೇಲೆ ಲೈಂಕಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಈ ವಿಷಯ ತಿಳಿದ ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ, ಆರೋಪಿ ಶಿಕ್ಷಕ ಪರಾರಿಯಾಗಿದ್ದನು. ಸದ್ಯ ಪೊಲೀಸರು ತಲೆಮರೆಸಿಕೊಂಡಿದ್ದ ಶಿಕ್ಷಕನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ದೂರು ನೀಡಿದವರೆಲ್ಲರೂ ಸಹ ಅಪ್ರಾಪ್ತ ಬಾಲಕಿಯರಾಗಿದ್ದಾರೆ.

ಪ್ರಧಾನಿ ಕಚೇರಿಗೆ ದೂರು

ಆರೋಪಿಯು ವಿದ್ಯಾರ್ಥಿಗಳನ್ನು ತನ್ನ ಕಚೇರಿಗೆ ಕರೆಸಿಕೊಂಡು ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಬಂಧ ಕೆಲವು ವಿದ್ಯಾರ್ಥಿಗಳು ದೌರ್ಜನ್ಯದ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಶಿಕ್ಷಕ ಎಂದರೆ ಇತರರಿಗೆ ಜ್ಞಾನ, ಸಾಮರ್ಥ್ಯ, ಮೌಲ್ಯಗಳನ್ನು ಪಡೆಯಲು ನೆರವು ನೀಡುವ ವ್ಯಕ್ತಿ. ಆದರೆ, ಇಂಥ ಗೌರವಯುತ ಸ್ಥಾನದಲ್ಲಿರುವ ಶಿಕ್ಷಕನೇ ಬಾಲಕಿಯರ ಮೇಲಿ ನೀಚ ಕೃತ್ಯ ಎಸೆಗಿರುವುದು ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.

Exit mobile version