Site icon PowerTV

ಶಮಿ-ಜಡ್ಡು ಜಾದು : ಹರಿಣಗಳ ವಿರುದ್ಧ ಭಾರತಕ್ಕೆ ಪ್ರಚಂಡ ಗೆಲುವು

ಬೆಂಗಳೂರು : ಬ್ಯಾಟಿಂಗ್​ನಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಶತಕ.. ಬೌಲಿಂಗ್​ನಲ್ಲಿ ಸರ್ ರವೀಂದ್ರ ಜಡೇಜಾ ಜಾದೂ. ಹರಿಣಗಳ ಹುಟ್ಟಡಗಿಸಿದ ಭಾರತ.

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಭಾರತ 243 ರನ್ ಗಳ ಅದ್ಭುತ ಗೆಲುವು ದಾಖಲಿಸಿದೆ. 327 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 27.1 ಓವರ್ ಗಳಲ್ಲಿ 83 ರನ್ ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರ ಮಾಡಿಕೊಂಡಿತು.

ಆಫ್ರಿಕಾ ಪರ ಡಸ್ಸನ್ 13, ಬಾವುಮಾ 11, ಮಿಲ್ಲರ್ 11 ರನ್ ಗಳಿಸಿದರು. ಭಾರತದ ಪರ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಜಡೇಜಾ 5 ವಿಕೆಟ್ ಉರುಳಿಸಿದರು. ಮೊಹಮ್ಮದ್ ಶಮಿ 2, ಸಿರಾಜ್ 1, ಕುಲದೀಪ್ 2 ವಿಕೆಟ್ ಪಡೆದರು.

Exit mobile version