Site icon PowerTV

ಮೂರನೇ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ : ಸಿಎಂ, ಡಿಸಿಎಂ, ಹೆಚ್​ಡಿಕೆ ಭೇಟಿಗೆ ಡೇಟ್ ಫಿಕ್ಸ್

ಹಾಸನ : ಹಾಸನಾಂಬೆ ದರ್ಶನಕ್ಕೆ ಮೂರನೇ ದಿನವೂ ಭಕ್ತ ಸಾಗರ ಹರಿದುಬಂತು. ಇಂದು‌ ರಜೆ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ‌ ಪಡೆದು ಪುನೀತರಾದರು.

ಮೂರನೇ‌ ದಿನವೂ ಸಹಸ್ರಾಹರು ಭಕ್ತರು ಮುಂಜಾನೆ 5 ಗಂಟೆಯಿಂದಲೂ ಸರತಿ ಸಾಲಲ್ಲಿ ಹಾಸನಾಂಬೆಯ ದರ್ಶನ ಪಡೆದರು. ಇಂದೂ ಕೂಡಾ ಮಾಜಿ ಸಚಿವ ಮಾಧುಸ್ವಾಮಿ, ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶರತ್ ಚಂದ್ರ ಸೇರಿದಂತೆ ಹಲವು ಗಣ್ಯರು ಕೂಡಾ ತಾಯಿಯ ದರ್ಶನವನ್ನ ಪಡೆದರು. ಇಂದು ರಜಾ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಆಗಮಿಸಿದ್ರು. ಪವಾಡ ನಡೆಯೋ ಕ್ಷೇತ್ರಕ್ಕೆ ಬಂದಿದ್ದು,ಬಹಳ ಸಂತೋಷವಾಯ್ತು, ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಯನ್ನ ಮಾಡಿದೆ ಅಂತಾ ಗುಚ್ಚಿಗಿಲಿಗಿಲಿ ನಟ ರಾಘವೇಂದ್ರ ಹೇಳಿದರು.

ಹಾಸನಾಂಬೆ ಜಾತ್ರಾಮಹೋತ್ಸವದ ಅಂಗವಾಗಿ ನಗರದ ಜನರಿಗೆ ಹೆಲಿಕಾಪ್ಟರ್ ಮೂಲಕ ಹಾರಾಡೋದಕ್ಕೆ ಹೆಲಿಟೂರಿಸಂ ವ್ಯವಸ್ಥೆಯನ್ನ ಕಲ್ಪಿಸಿದೆ, ಕಳೆದ ಎರಡು ದಿನಗಳಿಗಿಂತ ಹೆಚ್ಚಾಗಿ ಇಂದು ಜನರ ಹೆಲಿಕಾಪ್ಟರ್ ಅನುಭವನ್ನ ಪಡೆದುಕೊಂಡರು. ಬೆಂಗಳೂರು ಮೂಲದ 76 ವರ್ಷದ ವೃದ್ದೆ ಯುವಕ-ಯುವತಿಯರನ್ನೂ ನಾಚಿಸುವಂತೆ ಪ್ಯಾರಾಗ್ಲೈಡಿಂಗ್ ನಲ್ಲಿ ಹಾರಿದ್ದು, ಎಲ್ಲರ ಗಮನ ಸೆಳೆಯುತು. ಇನ್ನು ಹಾಸನಾಂಬೆಯ ಪವಾಡ ತಿಳಿದು ತಾಯಿಯನ್ನ ನೋಡೋದಕ್ಕೆ ಜನರು ಬಹಳ ಕುತೂಹಲದಿಂದ ಬರ್ತಿದ್ದಾರೆ.

ಸಿಎಂ, ಡಿಸಿಎಂ, ಹೆಚ್​ಡಿಕೆ ಭೇಟಿ ಯಾವಾಗ?

ಇದೇ ನವೆಂಬರ್ 7ರಂದು ಸಿಎಂ ಸಿದ್ದರಾಮಯ್ಯ, ನವೆಂಬರ್ 8ರಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನವೆಂಬರ್ 9 ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಆಗಮಿಸಲಿದ್ದಾರೆ. ಇನ್ನೂ ಅನೇಕ ಸಚಿವರು, ಮಾಜಿ ಸಚಿವರು ಮುಂದಿನ ವಾರ ತಾಯಿಯ ದರ್ಶನಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಮುಂದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ.

Exit mobile version