Site icon PowerTV

ಸಿಎಂ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು : ಸಚಿವ ಮಂಕಾಳ ವೈದ್ಯ

ಕಾರವಾರ: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದು ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದು ಮಂಕಾಳ ವೈದ್ಯ ಹೇಳಿದ್ದಾರೆ.

ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷಕ್ಕೆ 136 ಸ್ಥಾನದಲ್ಲಿ ಗೆಲ್ಲಿಸಿ ಐದು ವರ್ಷ ಅಧಿಕಾರ ನಡೆಸಲು ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನೂ ನಾವು ಸುಳ್ಳು ಮಾಡುವುದಿಲ್ಲ ಎಂದರು.

ಮಾಜಿ ಸಚಿವ ಈಶ್ವರಪ್ಪ ಅವರು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎನ್ನುವ ಹೇಳಿಕೆಗೆ ತಿರುಗುಬಾಣಬಿಟ್ಟರು. ಈಶ್ವರಪ್ಪ ಮೊದಲು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಹೇಳಿ. ಅವರ ಯೋಗ್ಯತೆಗೆ ವಿರೋಧ ಪಕ್ಷದ ನಾಯಕರನ್ನು ಮಾಡಲು ಆಗಿಲ್ಲ. ಅವರು ಏನು ನಮಗೆ ಬುದ್ದಿ ಹೇಳೋದು ಎಂದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಮುಖ್ಯಮಂತ್ರಿ ಯಾರಾಗ್ತಾರೆ, ಎಷ್ಟು ವರ್ಷ ಆಗ್ತಾರೆ ಎನ್ನುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು.

 

Exit mobile version