Site icon PowerTV

ಪಾಕಿಸ್ತಾನ ವಾಯುನೆಲೆ ಮೇಲೆ ಉಗ್ರರು ದಾಳಿ: 40 ಯುದ್ದ ವಿಮಾನ ಧ್ವಂಸ!

ಇಸ್ಲಾಮಾಬಾದ್:‌ ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಿಯಾನ್‌ವಾಲಿ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಶನಿವಾರ (ನ.4) ಬೆಳಗಿನ ಜಾವ ಉಗ್ರರು ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪಾಕ್‌ ಸೇನೆಯು ಪ್ರತಿದಾಳಿ ಮೂಲಕ ಮೂವರು ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.

ಘಟನೆಯಿಂದ ಪಾಕಿಸ್ತಾನದ 40 ಯುದ್ದ ವಿಮಾನಗಳು ಧ್ವಂಸಗೊಂಡಿವೆ. ಪಂಜಾಬ್‌ ಪ್ರಾಂತ್ಯದಲ್ಲಿರುವ ತರಬೇತಿ ವಾಯುನೆಲೆಗೆ ಆತ್ಮಾಹುತಿ ಬಾಂಬ್ ದಾಳಿಕೋರರು ನುಗ್ಗಿದ್ದಾರೆ. ಡ್ರೋನ್‌ಗಳ ಮೂಲಕವೂ ವಾಯುನೆಲೆ ಮೇಲೆ ದಾಳಿ ನಡೆಸಿದ್ದಾರೆ. ಒಂದಷ್ಟು ಜನ ಗುಂಡಿನ ದಾಳಿಯನ್ನೂ ಮಾಡಿದ್ದಾರೆ. ಇದರಿಂದಾಗಿ ಪಾಕಿಸ್ತಾನದ ಯುದ್ಧವಿಮಾನಗಳು ಧ್ವಂಸಗೊಂಡಿವೆ.

ಇದನ್ನು ಓದಿ: ಗಾಂಜಾ ರಿಕವರಿಗೆ ತೆರಳಿದ್ದ ಕರ್ನಾಟಕ ಪೊಲೀಸರೇ ಅರೆಸ್ಟ್​!

ಹೆಚ್ಚು ಭದ್ರತೆ ಇದ್ದರೂ ಪಾಕಿಸ್ತಾನದ ವಾಯುನೆಲೆ ಮೇಲೆ ದಾಳಿ ಆರಂಭವಾಗುತ್ತಲೇ ಸೇನೆಯೂ ತಿರುಗೇಟು ನೀಡಿದೆ. ಸುಮಾರು 6 ಉಗ್ರರಲ್ಲಿ ಮೂವರು ಉಗ್ರರನ್ನು ಪಾಕ್‌ ಸೇನೆ ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.

ದಾಳಿಯ ಬಳಿಕ ಪಾಕಿಸ್ತಾನದ ಉಗ್ರ ಸಂಘಟನೆಯಾದ ‘ತೆಹ್ರೀಕ್‌ ಎ ಜಿಹಾದ್‌ ಪಾಕಿಸ್ತಾನವು’ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

 

 

Exit mobile version